ಸಂವಹನ ಜೀವನ ಕೌಶಲ್ಯಗಳ ತರಬೇತಿ
ಉಡುಪಿ, ಆ.3: ಉದ್ಯೋಗ ಮಾಹಿತಿ, ವ್ಯಕ್ತಿತ್ವ ವಿಕಸನ ಸಮಿತಿ ಹಾಗೂ ಐಕ್ಯುಎಸಿಯ ಸಹಕಾರದೊಂದಿಗೆ ಬೆಂಗಳೂರಿನ ಉನ್ನತಿ ಪೌಂಡೇಶನ್‌ನ ತರಬೇತುದಾರರಿಂದ 90 ದಿನಗಳ ಆಂಗ್ಲಬಾಷೆ ಸಂವಹನ ಮತ್ತು ಕೌಶಲ್ಯಗಳ ತರಬೇತಿ ಕಾರ್ಯಕ್ರಮವನ್ನು ಹಿರಿಯಡ್ಕ ಕಾಲೇಜಿನಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು. ಮುಖ್ಯ ತರಬೇತುದಾರರಾದ ಪ್ರವೀಣ್ ಹಾಗೂ ನವೀನ್ ತರಬೇತಿಯನ್ನು ಆರಂಭಿಸಿದರು. ಕಾಲೇಜಿನ ಪ್ರಾಂಶುಪಾಲ್ ಸೋಜನ್ ಕೆ. ಜಿ. ಅಧ್ಯಕ್ಷತೆಯನ್ನು ವಹಿಸಿದ್ದರು.
ಪ್ಲೇಸ್‌ಮೆಂಟ್ ಸೆಲ್‌ನ ಸಂಯೋಜಕಿ ಸುಷ್ಮಾರಾವ್ ಕೆ. ಕಾರ್ಯಕ್ರಮ ಆಯೋಜಿಸಿದರು. ಐಕ್ಯುಎಸಿ ಸಂಚಾಲಕಿ ಆಶಾ ಉಪಸ್ಥಿತರಿದ್ದರು. ಸುಮಾರು 40 ಅಂತಿಮ ವರ್ಷದ ವಿದ್ಯಾರ್ಥಿಗಳು ತರಬೇತಿಯ ಮೊದಲ ತಂಡದಲ್ಲಿ ಹೆಸರು ನೊಂದಾಯಿಸಿ ಭಾಗವಹಿಸಿದರು.
Next Story





