ಅಬ್ಬಿ ಜಲಪಾತಕ್ಕೆ ಜಿಲ್ಲಾಧಿಕಾರಿ ಭೇಟಿ

ಮಡಿಕೇರಿ, ಆ.3: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಅಬ್ಬಿ ಜಲಪಾತದಲ್ಲಿ ತೂಗು ಸೇತುವೆ ನಿರ್ಮಾಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಪರಿಶೀಲಿಸಿದರು.
ತೂಗು ಸೇತುವೆ ದುರಸ್ತಿ ನವೀಕರಣ ಸಂಬಂಧಿಸಿದಂತೆ ಸುಮಾರು 23 ಲಕ್ಷ ರೂ. ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಲಾಗಿದ್ದು, ಈ ಸಂಬಂಧ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಿಥಿಲಗೊಂಡಿರುವ ತೂಗು ಸೇತುವೆ, ಮೆಟ್ಟಿಲುಗಳು, ಚೈನ್‌ಲಿಂಕ್ ಬೇಲಿ ನಿರ್ಮಾಣ ಇತರ ಕಾಮಗಾರಿ ಅನುಷ್ಠಾನ ಸಂಬಂಧ ಪರಿಶೀಲನೆ ಮಾಡಿದರು.
ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿ.ಜಗನ್ನಾಥ, ತೂಗು ಸೇತುವೆ ನಿರ್ಮಾಣದಲ್ಲಿ ಪ್ರಸಿದ್ದಿ ಪಡೆದಿರುವ ಸುಳ್ಯದ ಗಿರೀಶ್ ಭಾರಧ್ವಾಜ್ ಸಂಸ್ಥೆಯ ಶಿವಶಂಕರ್, ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಎಂಜಿನಿಯರ್ ಪಾಂಡುರಂಗ, ಪ್ರಮೋದ್ ಇತರರು ಹಾಜರಿದ್ದರು.
Next Story





