ಜಿಪಂಗೆ ನೊಂದ ಡಿ ಗ್ರೂಪ್ ನೌಕರರ ಮನವಿ
ವೇತನ ಕೊಡಿಸಿ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ
ಹಾಸನ, ಆ.3: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರರಿಗೆ ಬಾಕಿ ಇರುವ ವೇತನ ಕೊಡಿಸಿ ನ್ಯಾಯ ದೊರಕಿಸಿಕೊಂಡುವಂತೆ ಒತ್ತಾಯಿಸಿ ಸಮತಾ ಸೈನಿಕ ದಳದ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಾರ್ಚ್-2017 ರಂದು ಗುತ್ತಿಗೆ ಆಧಾರದ ಮೇಲೆ 71 ಜನ ಗ್ರೂಪ್ ಡಿ ನೌಕರರನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತು. ಆದೇಶವನ್ನು ಮೀರಿ ಮನಬಂದಂತೆ 150 ಜನ ಅಭ್ಯರ್ಥಿಯನನು ನೇಮಿಸಿಕೊಂಡಿದೆ. ಆದರೆ ಸುಮಾರು 6 ತಿಂಗಳಿನಿಂದ ಯಾರಿಗೂ ಸಂಬಳ ನೀಡಿರುವುದಿಲ್ಲ. ವೇತನಕ್ಕಾಗಿ ಡಿಹೆಚ್‌ಓ ಕಛೇರಿಗೆ ಭೇಟಿ ನೀಡಿ ಸಮಸ್ಯೆ ಹೇಳಲು ಮುಂದಾದರೆ ಅಲ್ಲಿನ ಕೆಲ ಸಿಬ್ಬಂದಿಗಳು ಅವರ ರಕ್ಷಣೆಗೆ ನಿಂತು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
ನಂತರ ಡಿಹೆಚ್‌ಓ ಅವರು ಇನ್ನು ಮೂರು ದಿನಗಳಲ್ಲಿ ವೇತನ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಆದರೇ ಇಲ್ಲಿಯವರೆಗೂ ಯಾವುದೆ ಗಮನವನ್ನು ಕೊಡದೆ ಬೇಜವಬ್ಧಾರಿ ಪ್ರದರ್ಶಿಸಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಭವಾನಿ ಸೆಕ್ಯೂರಿಟಿ ಏಜೆನ್ಸಿಯ ರಾಮಣ್ಣ ಅವರನ್ನು ವಿಚಾರಿಸಿದರೆ ಪಾನ ಮತ್ತರಾಗಿ ಬಾಯಿಗೆ ಬಂದಂತೆ ವರ್ತಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಮೇಲೆ ಎಷ್ಟೆ ಬ್ರಷ್ಟಚಾರದ ಆರೋಪಗಳು ಇದ್ದರೂ ಕೂಡ ಅಲ್ಲಿ ಇರುವ ಸಿಬ್ಬಂದಿಗಳು ಇವರ ರಕ್ಷಣೆಗೆ ನಿಂತಿದ್ದಾರೆ. ಜೊತೆಗೆ ಜಿಲ್ಲಾ ಪಂಚಾಯತಿಯಿಂದಲೂ ನಮಗೆ ರಕ್ಷಣೆ ಸಿಗುತ್ತಿಲ್ಲ ಎಂದರು.
ಈ ಅಕ್ರಮದಲ್ಲಿ ಭಾಗಿ ಆಗಿರುವ ಸಿಬದಿ ವರ್ಗದವರು ಮತ್ತು ಭವಾನಿ ಸೆಕ್ಯೂರಿಟಿ ಏಜಿನ್ಸಿಯ ರಾಮಣ್ಣ ಇವರನ್ನು ಕೂಡಲೆ ಅಮಾನತ್ತು ಮಾಡಿ ನಮಗೆ ನ್ಯಾಯ ದೊರಕಿಸಿಕೊಟ್ಟು, ನಮ್ಮ ಬಾಕಿ ವೇತನವನ್ನು ಶೀಘ್ರದಲ್ಲಿಯೇ ಕೊಡಿಸುವಂತೆ ಜಿಲ್ಲಾ ಪಂಚಾಯತ್ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಮತಾ ಸೈನಿಕ ದಳ ಜಿಲ್ಲಾಧ್ಯಕ್ಷ ಆರ್.ಪಿ.ಐ. ಸತೀಶ್, ಸಾಮಾಜಿಕ ಕಾರ್ಯಕರ್ತ ಬಿ.ಹೆಚ್. ಯತೀಶ್ ಹಾಗೂ ನೊಂದ ನೌಕರರು ಇದ್ದರು.







