ನಿಗೂಡ ಜ್ವರಕ್ಕೆ ಮಹಿಳೆ ಸಾವು

ಕಡಬ, ಆ.03. ಪುತ್ತೂರು ತಾಲೂಕಿನ ಕಡಬ ಗ್ರಾಮದ ಪಿಜಕ್ಕಳ ಎಂಬಲ್ಲಿನ ಮಹಿಳೆಯೋರ್ವರು ನಿಗೂಡ ಜ್ವರಕ್ಕೆ ಗುರುವಾರ ಬಲಿಯಾಗಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಪಿಜಕ್ಕಳ ಲಕ್ಷ್ಮೀ ನಾರಾಯಣ ಆಚಾರಿ ಎಂಬವರ ಪತ್ನಿ ಸುಗುಣ(35) ಎಂದು ಗುರುತಿಸಲಾಗಿದೆ. ಇವರಿಗೆ ಒಂದು ವಾರದಿಂದ ಜ್ವರ ಕಾಣಿಸಿಕೊಂಡಿದ್ದು ಸ್ಥಳೀಯವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಜ್ವರ ಉಲ್ಬಣಿಸಿ ಕಡಬ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರೂ ಮೈ ನಡುಕ ಹೆಚ್ಚಾಗಿ ಜ್ವರ ಇನ್ನೂ ಹೆಚ್ಚಾಯಿತು. ಬಳಿಕ ಇಲ್ಲಿನ ವೈದ್ಯಾಧಿಕಾರಿಯವರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಇವರ ಜ್ವರದ ಬಗ್ಗೆ ರಕ್ತ ಪರೀಕ್ಷೆ ನಡೆಸಿದರೂ ಡೆಂಗ್ಯೂ ಅಥವಾ ಇತರ ಜ್ವರ ಯಾವುದೂ ಪತ್ತೆಯಾಗಿರಲಿಲ್ಲ. ಇದರಿದಾಗಿ ಮಹಿಳೆ ಎಚ್1 ಎನ್1 ಖಾಯಿಲೆಯಿಂದ ಮೃತಪಟ್ಟಿರಬಹುದು ಎನ್ನಲಾಗಿದೆ.
Next Story





