ಪ್ರತ್ಯೇಕ ಘಟನೆ ಇಬ್ಬರ ಆತ್ಮಹತ್ಯೆ
ಕುಂದಾಪುರ, ಆ.3: ವಂಡ್ಸೆ ಗ್ರಾಮದ ಕುಷ್ಠ ಪೂಜಾರಿ (60) ಎಂಬವರು ನಿನ್ನೆ ರಾತ್ರಿ 10ರಿಂದ ಇಂದು ಬೆಳಗ್ಗೆ 10:00 ಗಂಟೆಯ ನಡುವಿನ ಅವಧಿಯಲ್ಲಿ ತಲ್ಲೂರು ಗ್ರಾಮದ ಸೇತುವೆ ಬಳಿ ಇರುವ ಗಾಯತ್ರಿ ಸ್ವಾಮಿಲ್‌ಗೆ ಸಂಬಂಧಿಸಿದ ಶೆಡ್‌ನಲ್ಲಿ ಫ್ಯಾನ್‌ಗೆ ನೈಲಾನ್ ಹಗ್ಗವನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕೋಣಿ ಗ್ರಾಮದ ಕಟ್ಕೇರಿ ಜನತಾ ಕಾಲೋನಿಯ ನಿವಾಸಿ ರಾಧಾ (60) ಎಂಬವರು ನಿನ್ನೆ ಬೆಳಗ್ಗೆ 11:30ರ ಸುಮಾರಿಗೆ ತನ್ನ ಮನೆಯಲ್ಲಿ ವಿಷ ಪದಾರ್ಥ ಸೇವಿಸಿಸಿದ್ದು, ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೇ ಇಂದು ಅಪರಾಹ್ನ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





