ಕಾವ್ಯ ಸಾವಿನ ತನಿಖೆಗೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಒತ್ತಾಯ
ಉಡುಪಿ, ಆ.3: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ಅನುಮಾನಾಸ್ಪದ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಪ್ರಕರಣದ ಸತ್ಯಾಂಶ ಹೊರಬರಬೇಕು ಹಾಗೂ ಆರೋಪಿಗಳಿಗೆ ಕಾನೂನಾತ್ಮಕ ರೀತಿಯ ಶಿಕ್ಷೆಯಾಗಬೇಕೆಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಆಗ್ರಹಿಸಿದ್ದಾರೆ.
ಪ್ರಕರಣದ ಬಗ್ಗೆ ವಿಸ್ತ್ರತ ಮಾಹಿತಿ ಪಡೆಯಲು ಹಾಗೂ ಮೃತ ಕಾವ್ಯ ಪೂಜಾರಿಯ ಪೋಷಕರ ಅಭಿಪ್ರಾಯ ಹಾಗೂ ಅನಿಸಿಕೆ ತಿಳಿಯಲು ವೇದಿಕೆಯ ಪದಾಧಿಕಾರಿಗಳ ತಂಡ ಅವರ ಮನೆಗೆ ಭೇಟಿ ನೀಡಿದ್ದು, ತುರ್ತು ಆರ್ಥಿಕ ನೆರವನ್ನು ನೀಡಿ ಸಾಂತ್ವನದ ಮಾತುಗಳನ್ನಾಡಿ ಧೈರ್ಯ ತುಂಬಿದೆ. ನ್ಯಾಯಯುತ ತನಿಖೆಗಾಗಿ ನಡೆಯುವ ಹೋರಾಟಕ್ಕೆ ವೇದಿಕೆಯ ಬೆಂಬಲವಿದೆ ಎಂದು ಪ್ರವೀಣ್ ಪೂಜಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





