ಯಕ್ಷಗಾನ ಕಲಾವಿದರಿಗೆ ಮಣಿಪಾಲ ಹೆಲ್ತ್ ಕಾರ್ಡ್
ಉಡುಪಿ, ಆ.3: ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ಈ ಬಾರಿಯೂ ಯಕ್ಷಗಾನ ವೃತ್ತಿ ಕಲಾವಿದರಿಗೆ ಮಣಿಪಾಲ ಹೆಲ್ತ್ ಕಾರ್ಡ್ ಸೌಲಭ್ಯವನ್ನು ಕಲ್ಪಿಸಲಾಗುವುದು. ಇದರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾದವರಿಗೆ ಗರಿಷ್ಠ 50,000ರೂ.ವರೆಗಿನ ಉಚಿತ ವೈದ್ಯಕೀಯ ಲಭ್ಯವಾಗಲಿದೆ.
ಈ ಯೋಜನೆಯಿಂದ ಕಳೆದ ಬಾರಿ ಹಲವು ಕಲಾವಿದರು ಪ್ರಯೋಜನ ಪಡೆದಿದ್ದು, ಈ ಬಾರಿಯೂ ಅದನ್ನು ಅಪೇಕ್ಶಿಸುವವರು ಆ.15ರ ಒಳಗೆ ರೇಶನ್ ಕಾರ್ಡ್ ಝರಾಕ್ಸ್ ಮತ್ತು ಕಳೆದ ಬಾರಿಯ ಹೆಲ್ತ್ ಕಾರ್ಡ್‌ನ ಝರಾಕ್ಸ್ ಪ್ರತಿಯನ್ನು ಯಕ್ಷಗಾನ ಕಲಾರಂಗದ ಕಛೇರಿಗೆ ತಲುಪಿಸಬೇಕೆಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
Next Story





