Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಿಂದ...

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಿಂದ ತೋಂಟದ ಶ್ರೀಗಳ ಭೇಟಿ

ಲಿಂಗಾಯತ ಮತ್ತು ವೀರಶೈವ ಎರಡೂ ಬೇರೆ-ಬೇರೆ ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ : ಡಾ.ತೋಂಟದ ಶ್ರೀಗಳು

ವಾರ್ತಾಭಾರತಿವಾರ್ತಾಭಾರತಿ3 Aug 2017 10:12 PM IST
share

ಗದಗ,ಆ.3: ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಜಗದ್ಗುರು ತೋಂಟದಾರ್ಯ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ವೀರಶೈವ ಮಹಾಸಭೆಯ ಇತ್ತೀಚಿನ ನಿರ್ಣಯದ ಬಗೆಗೆ ವಿಷಯ ಪ್ರಸ್ತಾಪಿಸಿದರು, ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶ್ರೀಗಳು “ವೀರಶೈವ ಲಿಂಗಾಯತ ಎರಡೂ ಒಂದೇ ಅಲ್ಲ. ಅವು ಎಣ್ಣೆ-ನೀರು ಇದ್ದಂತೆ, ಅವುಗಳು ಎಂದೂ ಕೂಡುವುದಿಲ್ಲ. ಅಖಿಲ ಭಾರತ ವೀರಶೈವ ಮಹಾಸಭೆಯು ಲಿಂಗಾಯತ ಸಮಾಜದ ಹಿತವನ್ನು ಕಾಪಾಡುವುದು ಬಿಟ್ಟು ಕೆಲವು ಸ್ವಾಮೀಜಿಗಳ ಹಿತವನ್ನು ಕಾಪಾಡುತ್ತಿದೆ. ಆದರೇ ಬದ್ಧತೆಯುಳ್ಳ ಸ್ವಾಮೀಜಿಗಳಾದ ನಾವು ಸಮಾಜದ ಹಿತವನ್ನು ಕಾಪಾಡಬೇಕೇ ವಿನ: ಸ್ವಾರ್ಥಿಗಳ, ಕೆಲವು ಸ್ವಾಮೀಜಿಗಳ ಹಿತವನ್ನಲ್ಲ ಎಂದರು. ವೀರಶೈವ ಮಹಾಸಭೆಯು ಇರುವುದು ಸ್ವಾಮೀಜಿಗಳ ಸಲುವಾಗಿ, ನಾವು ಇರುವುದು ಸಮಾಜದ ಸಲುವಾಗಿ” ನಮ್ಮ ದಾರಿ ನಮಗೆ ನಿಮ್ಮ ದಾರಿ ನಿಮಗೆ ಎಂದು ಶ್ರೀಗಳು ಖಾರವಾಗಿ ಪ್ರತಿಕ್ರಿಯಿಸಿದರು.

    ಮುಂದುವರೆದು ಮಾತನಾಡುತ್ತಾ  “ವೀರಶೈವ ಮತ್ತು ಲಿಂಗಾಯತ ಧರ್ಮಕ್ಕೆ ಅಜಗಜಾಂತರ ವ್ಯತ್ಯಾಸವಿದೆ, ವೀರಶೈವ ಬಸವಣ್ಣನವರನ್ನು ಒಪ್ಪುವುದಿಲ್ಲ. ವೀರಶೈವ ಧರ್ಮ ಆಗಮ-ಉಪನಿಷತ್ತುಗಳನ್ನು ಆಧರಿಸಿದೆ, ಬಹುದೇವೊಪಾಸನೆಯನ್ನು ಪ್ರತಿಪಾದಿಸುತ್ತದೆ, ಹೋಮ-ಹವನಗಳನ್ನು ಆಚರಿಸುತ್ತದೆ, ಅಸ್ಪೃಶ್ಯತೆಯನ್ನು ಎತ್ತಿ ಹಿಡಿಯುತ್ತದೆ.

12ನೇ ಶತಮಾನದಲ್ಲಿ ವರ್ಣಭೇದ-ವರ್ಗಭೇದಗಳನ್ನು ಧಿಕ್ಕರಿಸಿ ಇಷ್ಟಲಿಂಗದ ಮೂಲಕ ಎಲ್ಲ ಕಾಯಕಜೀವಿಗಳನ್ನು ಒಂದಗೂಡಿಸಿದ ಕೀರ್ತಿ ಲಿಂಗಾಯತ ಧರ್ಮಕ್ಕೆ ಸಲ್ಲುತ್ತದೆ. ಬಸವ ತತ್ವವು ಈ ದೇಶವನ್ನು ಜಾತಿ-ವ್ಯವಸ್ಥೆಯಿಂದ, ಕೋಮುವಾದದಿಂದ ರಕ್ಷಿಸುವ ಸಾಮರ್ಥ್ಯ  ಹೊಂದಿದೆ.

ಒಂದು ವೇಳೆ ಭಾರತವು ಬಸವೇಶ್ವರರ ತತ್ವಗಳನ್ನು ಕಡೆಗಣಿಸಿದರೆ, ಭಾರತ ವಿಕೃತ ದೇಶವಾಗಿ ಮಾರ್ಪಡುತ್ತದೆ. ಸಂತರು-ದಾಸರು, ಅನುಭಾವಿ ಕವಿಗಳು ಮತ್ತು ದಕ್ಷಿಣ ಭಾರತಕ್ಕೆ ಬಂದ ಸೂಫಿಗಳು 12ನೇ ಶತಮಾನದ ನಂತರ ಬಂದವರಾಗಿದ್ದಾರೆ. ಪುರೋಹಿತಶಾಹಿಗಳು ಶರಣರ ಮೂಲ ವಚನಗಳನ್ನು ತಮ್ಮ ಅನೂಕೂಲಕ್ಕೆ ತಕ್ಕಂತೆ ತಿದ್ದಿದ್ದಾರೆ, ಅನೇಕ ಖೊಟ್ಟಿ ವಚನಗಳನ್ನು ಸೇರಿಸಿದ್ದಾರೆ, ಹೀಗೆಲ್ಲ ಮಾಡುವುದರ ಮೂಲಕ ಲಿಂಗಾಯತ ಮತ್ತು ವೀರಶೈವ ಎರಡೂ ಒಂದು ಎಂದು ಗೊಂದಲ ಸೃಷ್ಠಿಸಿದ್ದಾರೆ, ಇಂದು ಆ ಗೊಂದಲ ಇತ್ಯರ್ಥವಾಗಬೇಕಿದೆ, ಅದಕ್ಕೆ ಕಾಲ ಪಕ್ವವಾಗಿದೆ, ಸರ್ಕಾರ ಬೌಧ್ದರಿಗೆ-ಜೈನರಿಗೆ ನೀಡಿದಂತೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮತ್ತು ಸ್ವತಂತ್ರ ಧರ್ಮದ ಮಾನ್ಯತೆ ನೀಡುವುದು ಅಗತ್ಯವಾಗಿದೆ ಎಂದು ಶ್ರೀಗಳು ಮನವರಿಕೆ ಮಾಡಿಕೊಟ್ಟರು ಮತ್ತು ಶರಣರ ತತ್ವದ ಅಡಿಯಲ್ಲಿ ಮಹಾಸಭೆಯನ್ನು ಮುನ್ನಡೆಸಿದರೇ ಅದಕ್ಕೆ ಭವಿಷ್ಯತ್ತು ಇದೆ, ಇಲ್ಲವಾದರೇ ಅದಕ್ಕೆ ಭವಿಷ್ಯತ್ತು ಇಲ್ಲ.”

“ಇಲ್ಲವಾದರೇ ಅದು ರಾತ್ರಿ ಕಂಡ ಬಾವಿಯಲ್ಲಿ ಹಗಲಿನಲ್ಲಿ ಬಿದ್ದಂತಾಗುವುದು. ಶ್ರೀಮಂತರು, ಅಧಿಕಾರವಂತರು ಮಹಾಸಭೆಯಲ್ಲಿದ್ದು ಏನು ಮಾಡಿದರೂ ನಡೆಯುತ್ತದೆ ಎನ್ನುವದು ತಪ್ಪು ಎಂದು ಶ್ರೀಗಳು ಹೇಳಿದರು. ಅದಕ್ಕೂ ಮೊದಲು ಶ್ಯಾಮನೂರು ಶಿವಶಂಕರಪ್ಪನವರ ವೈಯಕ್ತಿಕ ದಾನಧರ್ಮದ ಗುಣವನ್ನು ಮತ್ತು ತಿಪ್ಪಣ್ಣವರಿಗೆ ಲಿಂಗಾಯತ ಧರ್ಮದ ಬಗೆಗೆ ಇರುವ ಬದ್ಧತೆಯನ್ನು ಶ್ರೀಗಳು ಪ್ರಶಂಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X