ಬಾಕ್ಸರ್ ವ್ಲಾಡಿಮಿರ್ ಕ್ಲಿಟ್‌ಸ್ಕ್ಕೊ ನಿವೃತ್ತಿ

ಲಂಡನ್, ಆ.3: ಮಾಜಿ ಹೇವಿವೇಟ್ ವಿಶ್ವ ಚಾಂಪಿಯನ್ ವ್ಲಾಡಿಮಿರ್ ಕ್ಲಿಟ್‌ಸ್ಕ್ಕೊ ಬಾಕ್ಸಿಂಗ್‌ನಿಂದ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. 41ರ ಹರೆಯದ ಉಕ್ರೇನ್‌ನ ವ್ಲಾಡಿಮಿರ್ ಎಪ್ರಿಲ್‌ನಲ್ಲಿ ವಿಂಬ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ 11ನೆ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಆಂಥೊನಿ ಜೊಶುವಾ ವಿರುದ್ಧ ಸೋತಿದ್ದರು. ತನ್ನ ವೆಬ್‌ಸೈಟ್‌ನಲ್ಲಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿರುವ ವ್ಲಾಡಿಮಿರ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಾಕಿದ್ದಾರೆ.
‘‘27 ವರ್ಷಗಳ ಹಿಂದೆ ಬಾಕ್ಸಿಂಗ್ ಪಯಣ ಆರಂಭಿಸಿದ್ದೆ. ಇದು ನಾನು ಆಯ್ಕೆ ಮಾಡಿಕೊಂಡಿದ್ದ ಉತ್ತಮ ವೃತ್ತಿಯಾಗಿತ್ತು’’ ಎಂದು ಒಟ್ಟು 64 ಪಂದ್ಯಗಳಲ್ಲಿ ಜಯ ದಾಖಲಿಸಿದ್ದ ವ್ಲಾಡಿಮಿರ್ ಹೇಳಿದ್ದಾರೆ.
Next Story





