ಕಾವ್ಯಾ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಯುವ ಜೆಡಿಎಸ್ ಆಗ್ರಹ
ಮಂಗಳೂರು, ಆ.4: ಯುವ ಪ್ರತಿಭೆಯಾಗಿದ್ದ ಕಾವ್ಯಾರ ಅನಿರೀಕ್ಷಿತ ಹಾಗೂ ಅಸಹಜ ಸಾವು ಸಮಾಜಕ್ಕೆ ಬೇಸರ ತಂದಿದೆ. ಆಕೆಯ ಸಾವಿನ ಬಗ್ಗೆ ಹುಟ್ಟಿರುವ ಸಂಶಯ ಹಾಗೂ ಗೊಂದಲ ನಿವಾರಿಸುವುದು ಶಿಕ್ಷಣ ಸಂಸ್ಥೆ ಮತ್ತು ಜಿಲ್ಲಾಡಳಿತದ ಹೊಣೆಯಾಗಿದೆ. ಆದ್ದರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದ ಜಿಲ್ಲಾ ಯುವ ಜೆಡಿಎಸ್ ಆಗ್ರಹಿಸಿದೆ.
ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಹೆತ್ತವರಲ್ಲಿ ಆತಂಕಕ್ಕೆ ಅವಕಾಶ ಉಂಟಾಗದಂತೆ ನೋಡಿಕೊಳ್ಳುವುದು ನಾಗರಿಕರ ಕರ್ತವ್ಯವಾಗಿದೆ. ಈ ದೃಷ್ಟಿಯಿಂದ ವದಂತಿಗಳಿಗೆ ಮಹತ್ವ ನೀಡದೆ, ಸಮಗ್ರ ತನಿಖೆಯ ಮೂಲಕ ಸತ್ಯಾಂಶ ಬಯಲಿಗೆ ಬರಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸುವ ಅಗತ್ಯವಿದೆ ಎಂದು ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಅಕ್ಷಿತ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





