ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ವರಮಹಾಲಕ್ಷ್ಮಿ ಪೂಜೆ ಆಚರಣೆ
ವಿಶೇಷ ವರಕ್ಕಾಗಿ ಮಹಿಳೆಯರಿಂದ ವರಮಹಾಲಕ್ಷ್ಮಿಗೆ ಪೂಜೆ

ಬಣಕಲ್, ಆ.4: ಕೊಟ್ಟಿಗೆಹಾರ ಮತ್ತು ಬಣಕಲ್ ಸುತ್ತಮುತ್ತ ವರಮಹಾಲಕ್ಷ್ಮಿಗೆ ಊರಿನ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಬಣಕಲ್‌ನ ಚೌಡೇಶ್ವರಿ ದೇವಿ ಅಮ್ಮನವರ ದೇವಸ್ಥಾನದಲ್ಲಿ ವರ ಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಸಾಮೂಹಿಕ ವಿಶೇಷ ವೃತ ಪೂಜೆಯನ್ನು ನಡೆಸಲಾಯಿತು.
ವರಮಹಾಲಕ್ಷ್ಮಿಯ ಪೂಜೆಯಂದು ಬಣಕಲ್ ಚೌಡೇಶ್ವರಿ ದೇವಿ ಅಮ್ಮನವರ ದೇವಸ್ಥಾನದಲ್ಲಿ ಪದ್ಮಾಸನೇ ಪದ್ಮಕರೇ ಶ್ರೀಲಕ್ಷ್ಮಿ, ಹರಿದ್ರ ಕುಂಕುಮ ಶೋಭಿತೇ ಶ್ರೀಮಹಾಲಕ್ಷ್ಮಿ, ಸರ್ವಲಂಕಾರ ಭೂಷಿತೆ ಶ್ರೀಮಹಾಲಕ್ಷ್ಮಿ, ಸುಲಕ್ಷಣ ಸಂಪನ್ನೇ ಶ್ರೀ ಮಹಾಲಕ್ಷ್ಮಿ, ಸಕಲಲೈಶ್ವರ್ಯ ಕರುಣಿಸೋ ಭಾಗ್ಯಧಾತೆ ಶ್ರೀ ಮಹಾಲಕ್ಷ್ಮಿ, ಸಕಲರಿಗೂ ಸುಖಶಾಂತಿ ಸಮೃಧ್ದಿ ಸನ್ಮಂಗಳವ ನೀಡಲು ವಿವಿಧ ಅಲಂಕಾರಗಳಲ್ಲಿ ಲಕ್ಷ್ಮಿಯನ್ನು ಸ್ಮರಿಸಿ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಲಾಯಿತು.
ಕೊಟ್ಟಿಗೆಹಾರದ ಸುತ್ತಮುತ್ತ ಮಹಿಳೆಯರು ವರಮಹಾಲಕ್ಷ್ಮಿಗೆ ಹಣ, ಹೂವು ಹಣ್ಣು, ಕಳಶ, ಸೀರೆ, ಬಳೆ, ವಿವಿಧ ಸಿಹಿ ಪದಾರ್ಥಗಳಾದ ಸಿಹಿಲಾಡು. ಕೀರು, ಗರ್ಜಿಕಾಯಿ ತಿಂಡಿ, ನೈವೇಧ್ಯವಾಗಿ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬದಲ್ಲಿ ಸಕಲ ಆಯುರಾರೋಗ್ಯ, ಐಶ್ವರ್ಯ ಮಹಾಲಕ್ಷ್ಮಿಯು ಕರುಣಿಸಲೆಂದು ಮಹಿಳೆಯರು ಒಂದೆಡೆ ಸೇರಿ ಪ್ರಾರ್ಥಿಸಿದರು.
ಕೊಟ್ಟಿಗೆಹಾರದ ಅನ್ನಪೂರ್ಣೇಶ್ವರಿ ನಿಲಯದಲ್ಲಿ ಹಾಗೂ ಖಾಸಗಿ ಬಸ್ ನಿಲ್ದಾಣದ ಸಮೀಪ ಇರುವ ಅಪೂರ್ವ ಬ್ಯೂಟಿ ಪಾರ್ಲರ್‌ನಲ್ಲೂ ಕೂಡ ಮಹಿಳೆಯರು ಸೇರಿ ವರಮಹಾಲಕ್ಷ್ಮಿಗೆ ಹೂವು ಹಣ್ಣು ಅರ್ಪಿಸಿ, ತಾಂಬೂಲ ಅರ್ಪಿಸಿ ವಿಶೇಷ ವರಕ್ಕಾಗಿ ಪ್ರಾರ್ಥಿಸಿದರು. ಹೆಣ್ಣು ಮಕ್ಕಳು ವಿಶೇಷವಾಗಿ ಮಹಾಲಕ್ಷ್ಮಿ ಪೂಜೆಯಲ್ಲಿ ವಿಶೇಷ ವರಕ್ಕಾಗಿ ಆರತಿ ಬೆಳಗಿದರು.
ಪೂಜೆಗೆ ಬಂದ ಮುತ್ತೈದೆಯರಿಗೆ ಬಳೆ,ಅರಿಶಿಣ,ಕುಂಕುಮ,ತಾಂಬೂಲ ಕೊಟ್ಟು ಮುತ್ತೈದೆ ಭಾಗ್ಯ ಉಳಿಸುವಂತೆ ವರಮಹಾಲಕ್ಷ್ಮಿ ಅಮ್ಮನವರಲ್ಲಿ ಬೇಡಿಕೊಂಡು ಗೌರವ ನೀಡಿದರು.ಪೂಜೆಗೆ ಜಮಾಯಿಸಿದವರಿಗೆ ಸಿಹಿ ತಿಂಡಿಯನ್ನು ವಿತರಿಸಿದರು.
ವರಮಹಾಲಕ್ಷ್ಮಿ ಪೂಜೆಯಲ್ಲಿ ಅನ್ನಪೂರ್ಣೇಶ್ವರಿ ನಿಲಯದ ಸಾವಿತ್ರಿ, ಜ್ಯೋತಿ, ಅಮೃತ ಹಾಗೂ ಅಪೂರ್ವ ಪಾರ್ಲರ್‌ನಲ್ಲಿ ಸುರೇಖ, ಆಶಾಶಂಕರ್, ಸೌಮ್ಯಅಶೋಕ್, ಸುಧಾ, ಶಶಿಕಲಾ ಮುಂತಾದವರು ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸಿದ್ದರು.







