ಗೋಳಿಕಟ್ಟೆ: ಕೆಸೊರೊಡೊಂಜಿ ದಿನ

ಉಡುಪಿ, ಆ.4: ಹಾವಂಜೆ ಗೋಳಿಕಟ್ಟೆಯ ಜನಪದ ಕಲಾಕೇಂದ್ರ ಮತ್ತು ಜನಪದ ಮಹಿಳಾ ಘಟಕದ ವತಿಯಿಂದ 5ನೆ ವರ್ಷದ ಕೆಸರೊಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷ ನಾಗರಾಜ ಹೆಗ್ಡೆ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಗಣೇಶ್ ಮಡಿವಾಳ ಮುಗ್ಗೇರಿ, ಮಹಿಳಾ ಸಂಘದ ಅಧ್ಯಕ್ಷೆ ಶಲ್ಮಾ ನಾಗರಾಜ ಹೆಗ್ಡೆ, ಜಯಶೆಟ್ಟಿ ಮುಗ್ಗೇರಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ನಾಟಿ ಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ, ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
Next Story





