ಕಾಸರಗೋಡು: ಬಾಲಕಿ ನಾಪತ್ತೆ

ಕಾಸರಗೋಡು, ಆ.4: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ನಾಪತ್ತೆಯಾದ ಘಟನೆ ಪಾಣತ್ತೂರಿನಲ್ಲಿ ನಡೆದಿದೆ.
ಪಾಣತ್ತೂರು, ಬಾಪುಂಗಳದ ಆಟೊ ಚಾಲಕ ಇಬ್ರಾಹೀಂ ಎಂಬವರ ಪುತ್ರಿ ಸನಾ ಫಾತಿಮಾ (4) ನಾಪತ್ತೆಯಾದ ಬಾಲಕಿ.
ಪಡುವತ್ ನ ಅಂಗನವಾಡಿಯಿಂದ ಗುರುವಾರ ಸಂಜೆ ಮನೆಗೆ ಬಂದಿದ್ದ ಬಾಲಕಿ, ಮನೆಯಂಗಳದಲ್ಲಿ ಆಟವಾಡುತ್ತಿದ್ದು ನಂತರ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





