ಲಾಡ್ಜ್‌ನಲ್ಲಿ ತಂಗಿದ್ದ ಉದ್ಯಮಿಗೆ ಸೇರಿದ ನಗದು ಕಳವು
ಶಿವಮೊಗ್ಗ, ಆ. 4: ರೆಸಿಡೆನ್ಸಿಯಲ್ಲಿ ತಂಗಿದ್ದ ಉದ್ಯಮಿಯೋರ್ವರಿಗೆ ಸೇರಿದ ಲಕ್ಷಾಂತರ ನಗದು ಸೇರಿದಂತೆ ಕೆಲ ದಾಖಲೆ ಪತ್ರ ಕಳವು ಮಾಡಿರುವ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಜೋಗ ರಸ್ತೆಯಲ್ಲಿರುವ ಪವಿತ್ರ ರೆಸಿಡೆನ್ಸಿಯಲ್ಲಿ ನಡೆದಿದೆ.
ಮುಂಬೈ ಮೂಲದ ಅನಲ್ ಸಾರಥಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಇವರು ಟಿಂಬರ್ ವ್ಯವಹಾರದ ನಿಮಿತ್ತ ಇತ್ತೀಚೆಗೆ ಸಾಗರ ಪಟ್ಟಣಕ್ಕೆ ಆಗಮಿಸಿ, ಪವಿತ್ರ ರೆಸಿಡೆನ್ಸಿಯಲ್ಲಿ ತಂಗಿದ್ದರು.
ಇವರು ಕೊಠಡಿಯಿಂದ ಕಾರ್ಯನಿಮಿತ್ತ ಹೊರ ತೆರೆಳಿದ್ದ ವೇಳೆ 1.20 ಲಕ್ಷ ನಗದು, ಡೆಬಿಟ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೈನ್ಸ್ ದಾಖಲಾತಿಯಿಟ್ಟಿದ್ದ ಪ್ಯಾಂಟ್ ಹಾಗೂ ಶರ್ಟ್ ಕಳವು ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ರೆಸಿಡೆನ್ಸಿಗೆ ಭೇಟಿಯಿತ್ತು ಪರಿಶೀಲಿಸಿದ್ದು, ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ. ಈ ಕುರಿತಂತೆ ಅನಲ್ ಸಾರಥಿಯವರು ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story





