ಅಂದರ್‌ಬಾಹರ್: ಐವರ ಸೆರೆ
ಬೈಂದೂರು, ಆ.4: ಯಳಜಿತ್ ಹೊಟೇಲ್ ಟೂರಿಸ್ಟ್ ಬಳಿ ಅಂದರ್‌ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಕಾಲ್ತೋಡಿನ ಸಿದ್ದ ಮರಾಠಿ(34), ವೆಂಕಟೇಶ(40), ಧನಂಜಯ(45), ರಾಗಿಹಕ್ಲುವಿನ ಹೆರಿಯ(36), ತೆಗ್ಗರ್ಸೆಯ ಸಂಜೀವ ಕೊಠಾರಿ(31) ಬಂಧಿತ ಆರೋಪಿಗಳು. ಇವರಿಂದ 850ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





