ಹನೂರು: ಸಿದ್ದರಾಮೇಶ್ವರ ಭೋವಿ ಯುವಕರ ಸಂಘದ ಉದ್ಘಾಟನೆ

ಹನೂರು, ಆ.4: ತಾಲ್ಲೂಕಿನ ರಾಮಾಪುರ ಹೋಬಳಿಯ ಪೂಜಾರಿದೂಡ್ಡಿಯಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭೋವಿ ಯುವಕರ ಸಂಘವನ್ನು ರಾಮಾಪುರ ವೃತ ನೀರಿಕ್ಷಕರಾದ ಶಿವಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಇವರು, ಬೋವಿ ಜನಾಂಗದವರು ಹಿಂದಿನಿಂದಲೂ ಕಡು ಬಡತನದಿಂದ ಬಂದಂತಹ ಜನಾಂಗವಾಗಿದ್ದು. ಇವರು ಜೀವನದಲ್ಲಿ ಈಗಲೂ ಸಹ ತುತ್ತು ಅನ್ನಕ್ಕೂ ಕಷ್ಟ ಪಡುವಂತಹ ಜನರಿದ್ದಾರೆ. ಇವರು ಹೆಚ್ಚಾಗಿ ಬಂಡೆಕಲ್ಲು ಒಡೆಯುವುದನ್ನೆ ತಮ್ಮ ವೃತ್ತಿಯನ್ನಾಗಿ ಮಾಡಿ ಕೊಂಡಿದ್ದಾರೆ ಮತ್ತು ರಾಮಾಪುರದ ಸುತ್ತಮುತ್ತ ಬೋವಿ ಜನಾಂಗದವರು ತಮ್ಮ ದಿನಗೂಲಿಗೋಸ್ಕರ ವಲಸೆ ಹೋಗುವುದು ಹೆಚ್ಚು .ಇವರ ಬದುಕಿನಲ್ಲಿ ಸಾಕಷ್ಟು ಸುದಾರಣೆಯಾಗಬೇಕು ಎನ್ನುವ ಮನೋಭಾವವನ್ನು ಇಟ್ಟುಕೊಂಡು ಇಂದಿನ ಯುವಕರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಸಮಾಜದಲ್ಲಿ ಹಲವು ಬದಲಾವಣೆಗಳನ್ನು ತರಲು ಯುವಕರು ಒಗ್ಗಟ್ಟಾಗಿ ಸಂಘವನ್ನು ಕಟ್ಟಿಕೂಂಡಿದ್ದಾರೆ. ಇದು ನಿಜ್ಜಕ್ಕೂ ಸ್ಲಾಘನೀಯ. ಸಂಘದ ಯುವಕರ ಪ್ರತಿಯೊಂದು ಕಾರ್ಯಗಳಲ್ಲೂ ನಾನು ನಿಮ್ಮೊಂಗಿದ್ದೇನೆ. ನಿಮ್ಮ ಸಮಾಜದಲ್ಲಿರುವ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸುವಿಕೆಗೆ ಆ ಮಕ್ಕಳ ಪೋಷಕರಿಗೆ ಸರಿಯಾದ ರೀತಿಯಾಗಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿ ಎಂದು ಕಿವಿ ಮತು ಹೇಳಿದರು.
ಈ ಸಮಾರಂಭದಲ್ಲಿ ಪೊನ್ನಾಚ್ಚಿ ವೈದಾಧಿಕಾರಿಗಳಾದ ರಾಜೇಶ್ ರಾಮಾಪುರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ, ಸದಸ್ಯರಾದ ಕಾಳಿಯಣ್ಣ, ಮುಂಖರಾದ ಬೂಸು ಬೋವಿ ಬಸವರಾಜು ಚಿನ್ನಸ್ವಾಮಿ ಹಾಗೂ ಅಂಬೇಡ್ಕರ್ ಯುವಜನ ಕಲಾಜನ ಸಂಘದ ಅದ್ಯಕ್ಷರಾದ ಸುಂದರೇಶ್ ಶ್ರೀ ಶಿವಯೋಗಿ, ಸಿದ್ದರಾಮೇಶ್ವರ ಭೋವಿ ಯುವಕರ ಸಂಘದ ಪದಾಧಿಕಾರಿಗಳಾದ ಕುಮಾರ್, ಅದ್ಯಕ್ಷ ವಂಕಟೇಶ್, ಉಪಾದ್ಯಕ್ಷರಾದ ರಾಮ್, ಕಾರ್ಯದರ್ಶಿ ಮಂಜುನಾಥ್ ಮಾರಿಯಪ್ಪನ್, ಮುರುಗನ್ ಮಾದೇಶ್ ಮತ್ತು ಇನ್ನಿತರರು ಹಾಜರಿದ್ದರು.







