ಶರಣ ಸಾಹಿತ್ಯ ಪರಿಷತ್ತಿಗೆ ಚಾಲನೆ

ಮಡಿಕೇರಿ, ಆ.4 :ಶರಣ ಸಾಹಿತ್ಯ ಪರಿಷತ್ತಿನ ವಿರಾಜಪೇಟೆ ತಾಲೂಕು ನೂತನ ಘಟಕಕ್ಕೆ ಚಾಲನೆ ನೀಡಲಾಯಿತು.
ಕೊಡ್ಲಿಪೇಟೆಯ ಶ್ರೀಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆವರಣದಲ್ಲಿರುವ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷರಾದ ಎಸ್.ಎಸ್.ಸುರೇಶ್ ರವರಿಗೆ ಕಲ್ಲುಮಠದ ಮಹಾಂತ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ, ಅಧಿಕಾರ ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಮಹೇಶ್ ವಹಿಸಿದ್ದರು. ಕಲ್ಲಳ್ಳಿ ಮಠಾಧೀಶರಾದ ಶ್ರೀ ರುದ್ರಮುನಿ ಸ್ವಾಮೀಜಿ, ಕೊಡಗು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ಗೋಪಾಲ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಪುಷ್ಪರಾಜೇಶ್, ನಿವೃತ್ತ ಪ್ರಾಂಶುಪಾಲ ಪ್ರೋ.ಧರ್ಮಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಎಸ್.ಎಮ್.ಡಿಸಿಲ್ವಾ, ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿರಾಜಪೇಟೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಎಸ್.ಬಿ.ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಾಜೇಂದ್ರ ಪ್ರಸಾದ್, ಖಚಾಂಚಿಯಾಗಿ ಎಸ್.ಪಿ.ಮೋಹನ್‌ಚಂದ್ರ, ನಿರ್ದೇಶಕರುಗಳಾಗಿ ಎಸ್.ಪಿ.ಜಗದೀಶ್, ರಫಿಕ್ ತೊಚಮ್ಮಕೇರಿ, ಎಸ್.ಆರ್.ತ್ಯಾಗರಾಜಪ್ಪ, ಎಸ್.ಎಸ್.ಶ್ರೀಕಂಠಪ್ಪ, ಡಿ.ಎಸ್.ಲೋಕೇಶ್, ಎಸ್.ಎನ್.ಸಂತೋಷ್, ಎನ್.ಎಂ.ರಾಜೇಶ್, ಎಸ್.ಎಂ.ವಿನಯ್, ಎಸ್.ಎಸ್.ಪಾಪಯ್ಯ, ಎಸ್.ಎಂ.ನಂಜಪ್ಪ, ಎಸ್.ಎಸ್.ನವೀನ್, ವಿ.ಪಿ.ವೆಂಕಟೇಶ್, ಎಸ್.ಶಂಕರ್, ಎಸ್.ಎಸ್.ಮಹೇಶ್, ವೇದಾ ಜಯರಾಜ, ಶೋಭ ಬಸವಣ್ಣ, ಎಸ್.ವಿ.ಉಮೇಶ್, ಕೆ.ಟಿ.ಬಿದ್ದಪ್ಪ, ಕೆ.ಎನ್.ತಾರಾ ಬಸಪ್ಪಾಜಿ ಆಯ್ಕೆಯಾಗಿದ್ದಾರೆ.





