ಕುಂಜತ್ತಬೈಲ್: ನೋಬಲ್ ಶಾಲೆಯಲ್ಲಿ ವನಮಹೋತ್ಸವ

ಮಂಗಳೂರು, ಆ. 4: ಕುಂಜತ್ತಬೈಲ್‌ನ ನೋಬಲ್ ಶಾಲೆಯಲ್ಲಿ ಇತ್ತೀಚೆಗೆ ವನಮಹೋತ್ಸವ ಆಚರಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಶಹನಾಝ್ ಶಾಲಾ ಆಡಳಿತಾಧಿಕಾರಿ ಮುಹಮ್ಮದ್ ಶಾರೀಕ್, ಶಾಲಾ ಮುಖ್ಯೋಪಾಧ್ಯಾಯರು ಗೋಪಾಲಕೃಷ್ಣ ಭಟ್ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಿಸರ್ಗ ಸಂಘದ ಶಿಕ್ಷಕಿಯರಾದ ಶ್ರೀಶ, ಪ್ರಪೂರ್ಣ, ಪ್ರಮೀಳಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿದ್ಯಾರ್ಥಿನಿ ಶಾಹಿಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





