ಆ.6: ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮಾನೋತ್ಸವ
ಉಡುಪಿ, ಆ.4: ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮಾನೋತ್ಸವ, ಕಾರ್ಮಿಕರಿಗೆ ಸನ್ಮಾನ, ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ಆ.6ರ ರವಿವಾರ ಬೆಳಗ್ಗೆ 10 ಗಂಟೆಗೆ ಮಿಷನ್ ಕಾಂಪೌಂಡಿನ ಯುಬಿಎಂಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಗಣಪತಿ ಕಿಣಿ, ಸಿದ್ಧಾಪುರದ ಮೆಹಬೂಬ ಮುಲ್ಲಾ, ಹೊಸದಿಲ್ಲಿಯ ಅನಿಲ್ ರಾವ್, ಸ್ಥಾಪಕಾಧ್ಯಕ್ಷ ಅಕ್ಬರ್ ಅಲಿ, ಸಂಚಾಲಕ ವಿಜಯ ಸುವರ್ಣ ಭಾಗವಹಿಸುವರು ಎಂದರು.
ಹತ್ತು ವರ್ಷಗಳ ಹಿಂದೆ ನಾವು ಒಂದಾಗಿ ಒಕ್ಕೂಟ ರಚಿಸಿಕೊಳ್ಳುವಾಗ ಇದ್ದ 200 ಅಂಗಡಿಗಳು ಇಂದು 700ಕ್ಕೇರಿವೆ. ಒಟ್ಟು ಆರು ವಲಯಗಳಲ್ಲಿ 10,000 ಮಂದಿ ಕಾರ್ಮಿಕರು ಇದರ ಮೂಲಕ ಉದ್ಯೋಗ ಪಡೆದಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಗಣೇಶ್ ಎಂ.ಶಿರಿಯಾರ, ಉಪಾಧ್ಯಕ್ಷ ರಾಜೇಶ್ ಶೇಟ್, ರಾಜೇಶ್ ಉಡುಪಿ, ವಲಯಾಧ್ಯಕ್ಷ ರಾಜೇಶ್ ಅಲೆವೂರು ಉಪಸ್ಥಿತರಿದ್ದರು.





