ಬಸ್-ಸ್ಕೂಟರ್ ಢಿಕ್ಕಿ: ದಂಪತಿಗೆ ಗಾಯ
ಉಡುಪಿ, ಆ.4: ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇಂದು ಮಧ್ಯಾಹ್ನ 12.45ರ ಸುಮಾರಿಗೆ ಬಸ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತ ದಲ್ಲಿ ದಂಪತಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ತೆಂಕನಿಡಿಯೂರು ಗ್ರಾಮದ ಲಕ್ಷ್ಮಿನಗರದ ನಿವಾಸಿ ಲಕ್ಷ್ಮಣ ಗಾಣಿಗ(53) ಹಾಗೂ ಅವರ ಪತ್ನಿ ಶಕುಂತಳಾ ಎಂದು ಗುರುತಿಸ ಲಾಗಿದೆ. ಇವರು ಸ್ಕೂಟರ್‌ನಲ್ಲಿ ಉಡುಪಿಯಿಂದ ಮಣಿಪಾಲ ಕಡೆಗೆ ಹೊಗುತ್ತಿದ್ದಾಗ ಹಿಂದಿನಿಂದ ಬಂದ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರ ಪರಿಣಾಮ ದಂಪತಿ ರಸ್ತೆಗೆ ಬಿದ್ದು ಗಾಯಗೊಂಡರು. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





