Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಮಾಹಿತಿ - ಮಾರ್ಗದರ್ಶನ
  3. ವಿದೇಶಗಳಲ್ಲಿ ವೈದ್ಯಕೀಯ ಕಲಿಯುವ...

ವಿದೇಶಗಳಲ್ಲಿ ವೈದ್ಯಕೀಯ ಕಲಿಯುವ ಸುವರ್ಣಾವಕಾಶ!

ಇಲ್ಲಿದೆ ನಿಮಗೆ ಬೇಕಾದ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ4 Aug 2017 11:24 PM IST
share
ವಿದೇಶಗಳಲ್ಲಿ ವೈದ್ಯಕೀಯ ಕಲಿಯುವ ಸುವರ್ಣಾವಕಾಶ!

ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ವಿದ್ಯಾರ್ಥಿಗಳು ವಿದೇಶಗಳ ವಿಶ್ವವಿದ್ಯಾನಿಲಯಗಳನ್ನು ಅರಸಿ ಹೋಗುತ್ತಾರೆ. ವಿದೇಶದಲ್ಲಿನ ಅಧ್ಯಯನದಿಂದ ಸಂವಹನ, ವಿವಿಧ ಭಾಷೆಗಳ ಕಲಿಕೆ, ಜ್ಞಾನದ ವಿಸ್ತಾರದ ಜೊತೆಗೆ ವಿವಿಧ ಸಂಸ್ಕೃತಿಯ ಬಗೆಗಿನ ಜ್ಞಾನ ವೃದ್ಧಿಯಾಗುತ್ತದೆ. ಜೊತೆಗೆ ವಿವಿಧ ದೇಶಗಳ ಜನರೊಂದಿಗೆ ಬೆರೆಯಲೂ ಸಾಧ್ಯವಾಗುತ್ತದೆ. ವಿದೇಶಗಳಲ್ಲಿ ಕಲಿಯಲು ದೇಶದಿಂದ ಸಾವಿರಾರುವ ವಿದ್ಯಾರ್ಥಿಗಳು ತೆರಳುತ್ತಾರೆ. ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿರುವ ಅತ್ಯುನ್ನತ ವಿವಿಗಳ ಬಗ್ಗೆ ಮಂಗಳೂರಿನ ಎಜ್ಯುವರ್ಲ್ಡ್ ಸಮರ್ಪಕ ಮಾಹಿತಿ ನೀಡುತ್ತದೆ.

ಎಜ್ಯುವರ್ಲ್ಡ್: ಎಜ್ಯುವರ್ಲ್ಡ್ 2001ರಿಂದಲೂ ವಿದೇಶಿ ವಿದ್ಯಾರ್ಥಿಗಳ ನೇಮಕಾತಿಯಲ್ಲಿ ತೊಡಗಿಸಿಕೊಸಿಕೊಂಡಿದ್ದು, ಇದರ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ. 15 ವರ್ಷಗಳ ಅವಧಿಯಲ್ಲಿ ಎಜ್ಯುವರ್ಲ್ಡ್ ಕರ್ನಾಟಕ, ಕೇರಳ ಮತ್ತು ದಕ್ಷಿಣ ಭಾರತದ ವಿವಿಧೆಡೆಗಳಲ್ಲಿ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. ಶ್ರೀಲಂಕಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲೂ ಇದರ ಕಚೇರಿಗಳಿವೆ. ಭಾರತ ಹಾಗೂ ವಿದೇಶಗಳ 200ಕ್ಕೂ ಹೆಚ್ಚು ವೃತ್ತಿಪರ ಕಾಲೇಜುಗಳ ಜತೆ ಎಜ್ಯುವರ್ಲ್ಡ್ ಸಹಯೋಗ ಹೊಂದಿದ್ದು, ಚೀನಾ, ಫಿಲಿಫೀನ್ಸ್, ಉಕ್ರೇನ್, ಕೆರೀಬಿಯನ್, ಯೂರೋಪ್, ಕೆನಡಾ, ರಷ್ಯಾ ಮತ್ತಿತರ ದೇಶಗಳ ವಿಶ್ವದರ್ಜೆಯ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಹಕರಿಸುತ್ತಿದೆ. 

ವಿದೇಶಗಳಲ್ಲಿ ಅಧ್ಯಯನಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ವಿಮಾನ ನಿಲ್ದಾಣಗಳಲ್ಲಿ ಪಿಕ್ ಅಪ್ ಸೇವೆ, ಹೋಂಸ್ಟೇ ಆಯೋಜಿಸುವುದು ಮತ್ತು ಬ್ಯಾಂಕ್ ಖಾತೆ ತೆರೆಯಲು ಸಹಕಾರ ನೀಡುವುದು ಹೀಗೆ ಎಲ್ಲಾ ರೀತಿಯ ಸಹಾಯಗಳನ್ನೂ ಎಜ್ಯುವರ್ಲ್ಡ್ ಮಾಡುತ್ತದೆ. ಸಂಸ್ಥೆಯ ಅನುಭವಿ ಶಿಕ್ಷಣ ಸಲಹೆಗಾರರು, ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಲೆ, ಆಸಕ್ತಿ, ಮನೋಪ್ರವೃತ್ತಿ ಹಾಗೂ ಆಕಾಂಕ್ಷೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾರೆ.

ಅಂತಾರಾಷ್ಟ್ರೀಯ ಸಂಪರ್ಕವನ್ನು ಸುಧಾರಿಸಿಕೊಳ್ಳಲು, ವಿಭಿನ್ನ ಸಂಸ್ಕೃತಿ ಮತ್ತು ದೃಷ್ಟಿಕೋನದ ಪರಿಚಯ ಬೆಳೆಸಿಕೊಳ್ಳಲು, ವಿಭಿನ್ನ ಸಂಸ್ಕೃತಿಗೆ ತೆರೆದುಕೊಳ್ಳಲು,  ಭಾಷಾಕೌಶಲ ವಿಸ್ತರಿಸಿಕೊಳ್ಳಲು, ಬೇರೆ ದೇಶದ ಜೀವನಾನುಭವ ಬೆಳೆಸಿಕೊಳ್ಳಲು,  ಪ್ರೌಢಿಮೆ ಹಾಗೂ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ವಿದೇಶಗಳಲ್ಲಿ ನಡೆಸುವ ಶಿಕ್ಷಣ ನೆರವಾಗುತ್ತದೆ. 

ವಿದ್ಯಾರ್ಥಿಗಳು ವಿದೇಶಿ ಶಿಕ್ಷಣಕ್ಕಾಗಿ ಆಯ್ದುಕೊಳ್ಳಬೇಕಾದ ಪ್ರಮುಖ ದೇಶಗಳ ವಿವರ ಹೀಗಿದೆ.

ರಷ್ಯಾ: ವಿಶ್ವದ ಅತಿದೊಡ್ಡ ದೇಶಗಳಲ್ಲಿ ರಷ್ಯಾ ಕೂಡಾ ಒಂದು. ಹದಿನಾಲ್ಕು ದೇಶಗಳ ಜತೆ ಗಡಿ ಹಂಚಿಕೊಂಡಿರುವ ರಷ್ಯಾ ವಿಶ್ವದಲ್ಲೇ ಅತಿಹೆಚ್ಚು ಸಾಕ್ಷರತೆ (ಶೇಕಡ 99.6) ಹೊಂದಿರುವ ದೇಶ. ಈ ಕಾರಣದಿಂದ ಇದು ಭಾರತ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಉನ್ನತ ಶಿಕ್ಷಣ ತಾಣವಾಗಿ ಖ್ಯಾತಿ ಪಡೆದಿದೆ. ಅಂತಾರಾಷ್ಟ್ರಿಯ ಗುಣಮಟ್ಟ ಮತ್ತು ಶೈಕ್ಷಣಿಕ ವೆಚ್ಚ ಕೈಗೆಟುಕುವಂತಿರುವುದು ಇದಕ್ಕೆ ಕಾರಣ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ರಷ್ಯಾಗೆ ಉತ್ತಮ ಹೆಸರಿದೆ. ರಷ್ಯಾದ ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಯಶಸ್ವಿಯಾಗಿವೆ. ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ವೈದ್ಯಕೀಯ ವಿಶ್ವವಿದ್ಯಾನಿಲಯಗಳಿವೆ.

ರಷ್ಯಾದಲ್ಲಿ ಅಧ್ಯಯನ ಮಾಡುವ ಲಾಭ

  • ಉನ್ನತ ಬೋಧನಾ ಸೌಕರ್ಯಗಳೊಂದಿಗೆ ವಿಶ್ವದರ್ಜೆಯ ವೈದ್ಯಕೀಯ ಶಿಕ್ಷಣ.
  • ಬೇರೆ ದೇಶಗಳಿಗೆ ಹೋಲಿಸಿದರೆ, ವೈದ್ಯಕೀಯ ಶಿಕ್ಷಣಕ್ಕೆ ರಷ್ಯಾದ ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯ ಅತ್ಯಧಿಕ ಸಬ್ಸಿಡಿ ನೀಡುತ್ತಿದೆ. 
  • ರಷ್ಯಾದ ವೈದ್ಯಕೀಯ ವಿಶ್ವವಿದ್ಯಾನಿಲಯಗಳನ್ನು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೆಂದರೆ, ಉನ್ನತ ಗುಣಮಟ್ಟದ ಶಿಕ್ಷಣ ಹಾಗೂ ಕಡಿಮೆ ವೆಚ್ಚ ಹಾಗೂ ಉತ್ತಮ ವಸತಿ ಸೌಲಭ್ಯ. 
  • ಜಾಗತಿಕವಾಗಿ ಮಾನ್ಯತೆ ಇರುವ ವೈದ್ಯಕೀಯ ಪದವಿ: ವಿಶ್ವ ಆರೋಗ್ಯ ಸಂಸ್ಥೆ, ಯೂರೋಪಿಯನ್ ಯೂನಿಯನ್, ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಡೈರೆಕ್ಟರಿ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಇಂಗ್ಲೆಂಡಿನ ಜನರಲ್ ಮೆಡಿಕಲ್ ಕೌನ್ಸಿಲ್ ಹೀಗೆ ಹಲವು ಸಂಸ್ಥೆಗಳು ರಷ್ಯಾದ ವೈದ್ಯಕೀಯ ಶಿಕ್ಷಣವನ್ನು ಮಾನ್ಯ ಮಾಡುತ್ತಿವೆ.
  • ಯುಎಸ್‍ಎಂಎಲ್‍ಇ ಹಾಗೂ ಎಂಸಿಐ ಪರೀಕ್ಷೆಗಳಿಗೆ ಉತ್ತಮ ತರಬೇತಿ ವ್ಯವಸ್ಥೆ
  • ಪ್ರವೇಶ ಪರೀಕ್ಷೆ ಇಲ್ಲದಿರುವುದು
  • ಸುಲಭವಾದ ಪ್ರವೇಶ ಪ್ರಕ್ರಿಯೆ
  • ಇಐಎಲ್‍ಟಿಎಸ್/ಟಿಓಇಎಫ್‍ಎಲ್ ಪರೀಕ್ಷೆಗಳು ಕಡ್ಡಾಯವಲ್ಲ ಅಥವಾ ಅಗತ್ಯವಲ್ಲ.

ಎಜ್ಯುವರ್ಲ್ಡ್ ಜತೆ ಸಂಬಂಧ ಹೊಂದಿರುವ ರಷ್ಯಾದ ವಿಶ್ವವಿದ್ಯಾನಿಲಯಗಳು
1. ಫಾರ್ ಈಸ್ಟನ್ ಫೆಡರಲ್ ಯುನಿವರ್ಸಿಟಿ


2. ನಾರ್ಥರ್ನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ


3. ಸ್ಮೋಲೆನ್‍ಸ್ಕ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ
4. ಸ್ಟಾರ್ವೋಪೋಲ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ
5. ಸೈಬೀರಿಯನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ

ಚೀನಾ: ಚೀನಾದ ಬಹುತೇಕ ವಿಶ್ವವಿದ್ಯಾನಿಲಯಗಳು 125 ವರ್ಷಕ್ಕಿಂತ ಹೆಚ್ಚಿನ ಇತಿಹಾಸ ಹೊಂದಿವೆ. ಅಂತಾರಾಷ್ಟ್ರೀಯವಾಗಿ ವೈದ್ಯಕೀಯ ಶಿಕ್ಷಣ ಪಡೆಯುವ ಆಕಾಂಕ್ಷಿಗಳಿಗೆ ಚೀನಾ ಇಂದು ವೇಗವಾಗಿ ಬೆಳೆಯುತ್ತಿರುವ ಶೈಕ್ಷಣಿಕ ತಾಣ. ಇತ್ತೀಚಿನ ವರ್ಷಗಳಲ್ಲಿ ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು ಚೀನಾವನ್ನು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಮೆರಿಕ ಮತ್ತು ಆಸ್ಟ್ರೇಲಿಯಾವನ್ನು ಹೊರತುಪಡಿಸಿದರೆ, ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವೈದ್ಯಕೀಯ ಶಿಕ್ಷಣ ತಾಣವಾಗಿದೆ. ಇಂದು ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಅತ್ಯಂತ ಎತ್ತರಕ್ಕೆ ಬೆಳೆದಿದೆ. ಭಾರತದ ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಚೀನಾಗೆ ಬಂದು ತಮ್ಮ ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸುತ್ತಿದ್ದಾರೆ. ಚೀನಾದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ, ಎಂಸಿಐ, ಯುಎಸ್‍ಎಂಎಲ್‍ಇ, ಎಸ್‍ಸಿಎಚ್‍ಎಸ್ ಹಾಗೂ ಪಿಎಂಡಿಸಿ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.

  • ಚೀನಾದ ವೈದ್ಯಕೀಯ ವಿಶ್ವವಿದ್ಯಾನಿಲಯಗಳನ್ನು ಸಾರ್ವಜನಿಕ ಆರೋಗ್ಯ ಸಚಿವಾಲಯ ನಿರ್ವಹಿಸುತ್ತದೆ.
  • ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ಅಲ್ಲಿನ ಶಿಕ್ಷಣ ಸಚಿವಾಲಯ ಖಾತ್ರಿಪಡಿಸುತ್ತದೆ.
  • ಚೀನಾದ ವಿವಿಗಳು ಭಾರತದ ವೈದ್ಯಕೀಯ ಮಂಡಳಿಯ ಮಾನ್ಯತೆ ಪಡೆದಿವೆ.
  • ಚೀನಾದಲ್ಲಿ ಅಧ್ಯಯನ ಮತ್ತು ಜೀವನ ಸಾಗಿಸುವುದು ಯೂರೋಪಿಯನ್ ದೇಶಗಳು, ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಮತ್ತಿತರ ದೇಶಗಳಲ್ಲಿ ಅಧ್ಯಯನ ಮಾಡುವುದಕ್ಕಿಂತ ಅಗ್ಗ.
  • ಚೀನಾ ಇನ್ನಷ್ಟು ಹೆಚ್ಚಿನ ವಿಶ್ವದರ್ಜೆಯ ವಿಶ್ವವಿದ್ಯಾನಿಲಯಗಳನ್ನು ಬೆಳೆಸಲು ಶಕ್ತಿಮೀರಿ ಶ್ರಮಿಸುತ್ತಿದೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ.
  • ವಿದೇಶಗಳಲ್ಲಿ ಅಧ್ಯಯನ ಮಾಡುವ ನಿರ್ಧಾರ ಕೈಗೊಳ್ಳಲು ಮುಖ್ಯವಾದ ಕಾರಣವೆಂದರೆ ದೊರಕುವ ಹಣಕಾಸು ಬೆಂಬಲ. ಚೀನಾ ಸರಕಾರ ಕೂಡಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಸ್ತೃತ ಶ್ರೇಣಿಯ ಹೂಡಿಕೆ ಅವಕಾಶವನ್ನು ಒದಗಿಸುತ್ತಿದೆ. 40 ಸಾವಿರ ಸ್ಕಾಲರ್‍ಶಿಪ್‍ಗಳನ್ನು 227 ಸಂಸ್ಥೆಗಳ ಮೂಲಕ ಒದಗಿಸುತ್ತಿದೆ.
  • ಇಲ್ಲಿ ಬೋಧನೆಯ ಪ್ರಮುಖ ಭಾಷೆ ಇಂಗ್ಲಿಷ್.
  • ಕೈಗೆಟುಕುವ ಶುಲ್ಕ ಹಾಗೂ ಜೀವನವೆಚ್ಚ
  • ಅತ್ಯುತ್ತಮ ಹಾಸ್ಟೆಲ್ ವ್ಯವಸ್ಥೆ ಹಾಗೂ ಅತ್ಯುನ್ನತ ಹಾಗೂ ಸುಭದ್ರ ಮೂಲಸೌಕರ್ಯ

ಎಜ್ಯುವರ್ಲ್ಡ್ ಜತೆ ಸಹಯೋಗ ಹೊಂದಿರುವ ವಿಶ್ವವಿದ್ಯಾನಿಲಯಗಳು
1. ಚೀನಾ ಮೆಡಿಕಲ್ ಯುನಿವರ್ಸಿಟಿ


2. ಜಿಯಾಂಗ್ಸು ಮೆಡಿಕಲ್ ಯುನಿವರ್ಸಿಟಿ
3. ಸೌತ್‍ಈಸ್ಟ್ ಯುನಿವರ್ಸಿಟಿ
4. ಯಂಗ್‍ಝೊಹು ಯುನಿವರ್ಸಿಟಿ
5. ನಂಗ್‍ಜಿಂಗ್ ಯುನಿವರ್ಸಿಟಿ ಆಫ್ ಚೈನೀಸ್ ಮೆಡಿಸಿನ್, ನಂಜಿಂಗ್


6. ಜಿಲಿನ್ ಯೂನಿವರ್ಸಿಟಿ

ಫಿಲಿಪ್ಪೀನ್ಸ್: ಫಿಲಿಪ್ಪೀನ್ಸ್ ಏಷ್ಯಾದಲ್ಲೇ ಅತ್ಯುತ್ತಮ ಶೈಕ್ಷಣಿಕ ವ್ಯವಸ್ಥೆಯನ್ನು ಹೊಂದಿದೆ. ಫಿಲಿಪ್ಪೀನ್ಸ್ ವಿಶ್ವದಲ್ಲಿ ಮೂರನೇ ಅತಿದೊಡ್ಡ ಇಂಗ್ಲಿಷ್ ಮಾತನಾಡುವ ದೇಶವಾಗಿದೆ ಹಾಗೂ ಏಷ್ಯಾದಲ್ಲೇ ಅತಿಹೆಚ್ಚು ಇಂಗ್ಲಿಷ್ ಸಾಕ್ಷರತೆ ಹೊಂದಿದ ದೇಶ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ದೇಶವಾದ ಫಿಲಿಪ್ಪೀನ್ಸ್ ವಿಶ್ವದಲ್ಲೇ ಅತ್ಯುತ್ತಮ ಆರೋಗ್ಯಸೇವೆ ಒದಗಿಸುವ ದೇಶಗಳಲ್ಲಿ ಒಂದಾಗಿದೆ. ಅತ್ಯುತ್ತಮ ಬೋಧನಾ ವ್ಯವಸ್ಥೆ ಮತ್ತು ಉನ್ನತ ಮಟ್ಟದ ತರಬೇತಿ ವ್ಯವಸ್ಥೆಯಿಂದಾಗಿ ಫಿಲಿಪ್ಪೀನ್ಸ್ನ ಎಂಬಿಬಿಎಸ್ ಕೋರ್ಸ್‍ಗಳು ಜನಪ್ರಿಯವಾಗುತ್ತಿವೆ. ವಿಶ್ವದ ಹಲವು ದೇಶಗಳಲ್ಲಿ ಫಿಲಿಪ್ಪೀನ್ಸ್ ವೈದ್ಯಕೀಯ ವಿಶ್ವವಿದ್ಯಾನಿಲಯಗಳು ಮಾನ್ಯತೆ ಪಡೆದಿವೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ, ಐಎಂಇಡಿ ಹಾಗೂ ಇಸಿಎಫ್‍ಎಂಜಿ ವೈದ್ಯಕೀಯ ಶಿಕ್ಷಣ ಡೈರೆಕ್ಟರಿಗಳ ಮಾನ್ಯತೆ ಪಡೆದಿವೆ.

ಫಿಲಿಪ್ಪೀನ್ಸ್ನಲ್ಲಿ ಅಧ್ಯಯನ ಮಾಡುವುದರ ಪ್ರಯೋಜನಗಳು

  • ಉನ್ನತ ಗುಣಮಟ್ಟದ ಶಿಕ್ಷಣ, ಸುರಕ್ಷಿತ ಹಾಗೂ ಕಲಿಕೆಗೆ ಅನುಕೂಲಕರ ವಾತಾವರಣ, ಕೈಗೆಟುಕುವ ಶುಲ್ಕ ವ್ಯವಸ್ಥೆ ಹಾಗೂ ಇತರ ಸಂಬಂಧಿತ ವೆಚ್ಚಗಳು
  • ಎಲ್ಲ ಹಂತಗಳಲ್ಲಿ ಬೋಧನೆಯ ಮಾಧ್ಯಮ ಇಂಗ್ಲಿಷ್. ವ್ಯವಹಾರ, ಶಿಕ್ಷಣ, ಸಂವಹನ ಮತ್ತು ವ್ಯಾಪಾರಕ್ಕೆ ವ್ಯಾಪಕವಾಗಿ ಇಂಗ್ಲಿಷ್ ಭಾಷೆಯನ್ನು ಬಳಸಲಾಗುತ್ತದೆ.
  • ಫಿಲಿಪ್ಪೀನ್ಸ್ ಕಾಲೇಜುಗಳು ನೀಡುವ ಶಿಕ್ಷಣಕ್ಕೆ ವಿಶ್ವ ಆಹಾರ ಸಂಸ್ಥೆ ಮತ್ತು ಭಾರತದ ವೈದ್ಯಕೀಯ ಮಂಡಳಿಯ ಮಾನ್ಯತೆ ಪಡೆದಿವೆ.
  • ಇಲ್ಲಿ ವಿದ್ಯಾರ್ಥಿಗಳಿಗೆ ನೀಡುವ ವಿಶಿಷ್ಟ ತರಬೇತಿಗಳು ಎಂಸಿಐ ಹಾಗೂ ಯುಎಸ್‍ಎಂಎಲ್‍ಇ ಸ್ಕ್ರೀನಿಂಗ್‍ಗೆ ಅನುಕೂಲವಾಗುತ್ತದೆ.
  • ಈ ದೇಶದಲ್ಲಿ ಜೀವನವೆಚ್ಚ ಕಡಿಮೆ ಇರುವುದು ಕೂಡಾ ವಿದ್ಯಾರ್ಥಿಗಳಿಗೆ ಅನುಕೂಲಕರ.
  • ಐಇಎಲ್‍ಟಿಎಸ್/ಟಿಒಇಎಫ್‍ಎಲ್ ಪರೀಕ್ಷೆಗಳು ಇಲ್ಲಿ ಕಡ್ಡಾಯವಲ್ಲ.
  • ಯಾವುದೇ ದೇಣಿಗೆ ಅಥವಾ ಕ್ಯಾಪಿಟೇಶನ್ ಸೇವಾ ಶುಲ್ಕ ಇರುವುದಿಲ್ಲ.
  • ಯಾವುದೇ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ಅಗತ್ಯ ಇರುವುದಿಲ್ಲ.
  • ವಿಶ್ವವಿದ್ಯಾನಿಲಯಗಳಲ್ಲಿ ಅತ್ಯುತ್ತಮ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಎಜ್ಯುವರ್ಲ್ಡ್ ಜತೆ ಸಹಯೋಗ ಹೊಂದಿರುವ ವಿಶ್ವವಿದ್ಯಾನಿಲಯಗಳು
1. ಏಂಜೆಲ್ಸ್ ಯೂನಿವರ್ಸಿಟಿ ಫೌಂಡೇಷನ್


2. ಎಎಂಎ ಸ್ಕೂಲ್ ಆಫ್ ಮೆಡಿಸಿನ್

ಉಕ್ರೇನ್: ಉಕ್ರೇನ್‍ನಲ್ಲಿ 800ಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳಿವೆ.  ವೈಜ್ಞಾನಿಕ ಸಂಶೋಧನೆಯಲ್ಲಿ ಖ್ಯಾತನಾಮರನ್ನು ಹೊಂದಿದ ದೇಶವಾಗಿರುವ ಉಕ್ರೇನ್ ನಲ್ಲಿ ಕೈಗೆಟುಕುವ ವೆಚ್ಚ, ಹಿತಕರವಾದ ಹವಾಮಾನ ಮತ್ತು ಇತರ ಉನ್ನತ ಗುಣಮಟ್ಟದ ಶಿಕ್ಷಣ ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಅನುಕೂಲತೆಗಳು. 

ಉಕ್ರೇನ್‍ನಲ್ಲಿ ಅಧ್ಯಯನ ಮಾಡುವುದರ ಪ್ರಯೋಜನಗಳು

  • ಉಕ್ರೇನ್ ಮೆಡಿಕಲ್ ಕಾಲೇಜುಗಳಲ್ಲಿನ ಶಿಕ್ಷಣ ಗುಣಮಟ್ಟ ಹಾಗೂ ಮೂಲಸೌಕರ್ಯಗಳು ಅತ್ಯುತ್ತಮವಾಗಿವೆ. ಉಕ್ರೇನ್ ವಿಶ್ವವಿದ್ಯಾನಿಲಯಗಳ ವಿಶ್ವರ್ಯಾಂಕಿಂಗ್ ಸರಾಸರಿ ಅಧಿಕ.
  • ಯುರೋಪಿಯನ್ ಒಕ್ಕೂಟದ ದೇಶವಾಗಿರುವ ಉಕ್ರೇನ್‍ನಲ್ಲಿ ಶೇ.100ರಷ್ಟು ಸಾಕ್ಷರತೆ ಸಾಧಿಸಲಾಗಿದೆ. ಇದರ ಜತೆಗೆ ವೈದ್ಯಕೀಯ ವಿಜ್ಞಾನವನ್ನು ಅಧ್ಯಯನ ಮಾಡಲು ವಿಶ್ವದಲ್ಲೇ ಅತ್ಯುತ್ತಮ ದೇಶವಾಗಿದೆ.
  • ಇಲ್ಲಿನ ವೈದ್ಯಕೀಯ ಪದವಿಗೆ ಜಾಗತಿಕ ಮಾನ್ಯತೆ ಇದ್ದು, ಎಂಸಿಐ, ಡಬ್ಲ್ಯುಎಚ್‍ಒ, ಯುನೆಸ್ಕೊ, ಪಿಎಲ್‍ಎಬಿ (ಯುಕೆ), ಯುಎಸ್‍ಎಂಎಲ್‍ಇ (ಯುಎಸ್‍ಎ) ಇದಕ್ಕೆ ಮಾನ್ಯತೆ ನೀಡಿವೆ.
  • ಯಾವುದೇ ಐಇಎಲ್‍ಟಿಎಸ್ ಅಥವಾ ಟಿಒಇಎಫ್‍ಎಲ್ ಅಗತ್ಯವಿಲ್ಲ.
  • ಉಕ್ರೇನಿಯನ್ ಬೋಧನಾ ವಿಧಾನ ವಿಶ್ವವ್ಯಾಪಿಯಾಗಿ ಸ್ವೀಕಾರಾರ್ಹವಾಗಿವೆ.
  • ವೈದ್ಯವಿಜ್ಞಾನಿ ಉಕ್ರೇನ್‍ನ ಪ್ರಮುಖ ಬಲಗಳಲ್ಲಿ ಒಂದಾಗಿದೆ.
  • ಇಂಗ್ಲಿಷ್ ಮಾಧ್ಯಮದ ಬೋಧನಾ ವ್ಯವಸ್ಥೆ ಇದೆ.
  • ಶಿಕ್ಷಣ ಮಿತವ್ಯಯಕಾರಿ

ಎಜ್ಯುವರ್ಲ್ಡ್ ಜತೆ ಸಹಯೋಗ ಹೊಂದಿರುವ ವಿಶ್ವವಿದ್ಯಾನಿಲಯಗಳು
1. ಜಪ್ರೊಝೋಯ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿ
2. ವಿಎನ್ ಕರಾಝಿನಾ ಕರ್ಕಿವ್ ನ್ಯಾಷನಲ್ ಯುನಿವರ್ಸಿಟಿ
3. ಕೆಎಲ್‍ಇವಿ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ

4. ಖರ್ವಿಕ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ

ಜಾರ್ಜಿಯಾ: ಯೂರೋಪ್ ಹಾಗೂ ಏಷ್ಯಾದ ಗಡಿಭಾಗದಲ್ಲಿ ಬರುವ ದೇಶ ಜಾರ್ಜಿಯಾ. ಜಾರ್ಜಿಯಾದಲ್ಲಿ ಎಂಬಿಬಿಎಸ್‍ ಅಧ್ಯಯನ ಮಾಡುವುದು ಭಾರತೀಯ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆ. ಏಕೆಂದರೆ ಇಲ್ಲಿ ಯಾವುದೇ ಕಠಿಣ ಪ್ರವೇಶ ಪರೀಕ್ಷೆ ಅಗತ್ಯವಿಲ್ಲ. ಜಾರ್ಜಿಯಾದ ವಿಶ್ವವಿದ್ಯಾನಿಲಯಗಳು ಅತ್ಯುತ್ತಮ ಹಾಗೂ ಅತ್ಯಾಧುನಿಕ ವೈದ್ಯಕೀಯ ಸಾಧನಗಳನ್ನು ಬಳಸುತ್ತವೆ. ಜತೆಗೆ ವಿಸ್ತೃತವಾದ ಬೋಧನಾ ಸಲಕರಣೆಗಳು ವೈದ್ಯಕೀಯ ಜ್ಞಾನ ವಿಸ್ತರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಇಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಪರೀಕ್ಷೆಯನ್ನು ಸುಲಭವಾಗಿ ನಿಭಾಯಿಸಬಹುದು. ಜಾರ್ಜಿಯಾದಲ್ಲಿ ವೈದ್ಯಕೀಯ ಪದವಿ ಪಡೆದವರಿಗೆ ಹಲವು ಪ್ರಯೋಜನಗಳಿದ್ದು, ಈ ಕಾರಣದಿಂದ ಜಾರ್ಜಿಯಾ ಎಂಬಿಬಿಎಸ್ ಕೋರ್ಸ್‍ಗೆ ಅಗ್ರಗಣ್ಯ ಆಯ್ಕೆಯ ದೇಶವಾಗುತ್ತಿದೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ವೃತ್ತಿಪರ ಉನ್ನತಿಗೂ ಸಹಕಾರಿಯಾಗಿದೆ.

ಜಾರ್ಜಿಯಾದಲ್ಲಿ ಅಧ್ಯಯನದ ಪ್ರಯೋಜನಗಳು

  • ವಿನೂತನ ಬೋಧನಾ ಸಲಕರಣೆಗಳು ಮತ್ತು ಆಧುನಿಕ ಸಾಧನಗಳು ಜಾರ್ಜಿಯಾದಲ್ಲಿ ಶಿಕ್ಷಣ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಏರಿಸಿವೆ.
  • ಜಾರ್ಜಿಯಾದ ಶಿಕ್ಷಣ ಗುಣಮಟ್ಟವು ಅಮೆರಿಕ, ಕೆನಡಾ, ಇಂಗ್ಲೆಂಡ್ ಅಥವಾ ಯೂರೋಪಿಯನ್ ದೇಶಗಳಲ್ಲಿ ಅಧ್ಯಯನ ಮಾಡುವಷ್ಟೇ ಗುಣಮಟ್ಟದ್ದು. ಇದು ವಿಶ್ವದ ಅತ್ಯಾಕರ್ಷಕ ಹಾಗೂ ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿರುವ ಅಭಿವೃದ್ಧಿಶೀಲ ದೇಶವಾಗಿದ್ದು, ಉನ್ನತ ಮಟ್ಟದ ಶಿಕ್ಷಣ ವ್ಯವಸ್ಥೆಯನ್ನೂ ಹೊಂದಿದೆ.
  • ಜಾರ್ಜಿಯಾದಲ್ಲಿ ಶೇಕಡ 100ರಷ್ಟು ಸಾಕ್ಷರತೆ ಇದ್ದು, ಇದು ದೇಶದ ಅಪೂರ್ವ ಸಾಧನೆಗಳಲ್ಲೊಂದು. ಇದು ದೇಶದ ಅತ್ಯುನ್ನತ ಹಾಗೂ ಸಮೃದ್ಧ ಶೈಕ್ಷಣಿಕ ಹಿನ್ನೆಲೆಗೆ ಹಿಡಿದ ಕನ್ನಡಿಯಾಗಿದೆ.
  • ಇಲ್ಲಿನ ಶಿಕ್ಷಣಕ್ಕೆ ಭಾರತೀಯ ವೈದ್ಯಕೀಯ ಮಂಡಳಿ, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕದ ಯುಎಸ್‍ಎಂಎಲ್‍ಇ ಮಾನ್ಯತೆ ಇದೆ.
  • ಇದು ಬೋಧನೆಯ ಪ್ರಾಯೋಗಿಕ ಆಯಾಮಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.
  • ಇಂಗ್ಲಿಷ್ ಮಾಧ್ಯಮದ ಬೋಧನಾ ವ್ಯವಸ್ಥೆ
  • ಬೋಧನಾ ಶುಲ್ಕ ಹಾಗೂ ಜೀವನ ವೆಚ್ಚ ಕಡಿಮೆ.

ಎಜ್ಯುವರ್ಲ್ಡ್ ಜತೆ ಸಹಯೋಗ ಹೊಂದಿರುವ ವಿಶ್ವವಿದ್ಯಾನಿಲಯ
ಟಿಬಿಐಲಿಸ್ಟ್ ಸ್ಟೇಟ್ ಯೂನಿವರ್ಸಿಟಿ

ಭಾರತದ ವೈದ್ಯಕೀಯ ಮಂಡಳಿ (ಎಂಸಿಐ): ಭಾರತದ ವೈದ್ಯಕೀಯ ಮಂಡಳಿಯು ದೇಶದಲ್ಲಿ ಉನ್ನತ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ನಿರ್ವಹಿಸುವಲ್ಲಿ ಮತ್ತು ಇದಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಮಾನ್ಯತೆ ಹಾಗೂ ನಿರ್ವಹಣೆಯ ಹೊಣೆಯನ್ನು ಹೊಂದಿದೆ. ದೇಶದಲ್ಲಿ ವೈದ್ಯರು ಕಾರ್ಯನಿರ್ವಹಿಸಲು ಅಗತ್ಯ ವೈದ್ಯಕೀಯ ಅರ್ಹತೆಗಳನ್ನು ಇದು ನಿಗದಿಪಡಿಸುತ್ತದೆ.

ಏಕರೂಪದ ಉನ್ನತ ಗುಣಮಟ್ಟವನ್ನು ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ ತರುವುದು ಮತ್ತು ವೈದ್ಯಕೀಯ ಅರ್ಹತೆಗೆ ಭಾರತ ಹಾಗೂ ವಿದೇಶಗಳಲ್ಲಿ ಮಾನ್ಯತೆ ನೀಡುವುದು ಇದರ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ. 
ಭಾರತದ ವೈದ್ಯಕೀಯ ಮಂಡಳಿಯ ಉದ್ದೇಶಗಳು
1. ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣದ ಏಕರೂಪದ ಗುಣಮಟ್ಟವನ್ನು ನಿರ್ವಹಿಸುವುದು.
2. ಭಾರತದ ಮತ್ತು ವಿದೇಶಿ ವೈದ್ಯಕೀಯ ಸಂಸ್ಥೆಗಳ ವೈದ್ಯಕೀಯ ಅರ್ಹತೆಗೆ ಮಾನ್ಯತೆ ನೀಡುವುದು ಮತ್ತು ಮಾನ್ಯತೆ ನೀಡಲ್ಪಟ್ಟ ಸಂಸ್ಥೆಗಳ ಮಾನ್ಯತೆಯನ್ನು ಅಗತ್ಯ ಬಿದ್ದರೆ ರದ್ದುಪಡಿಸಲು ಶಿಫಾರಸು ಮಾಡುವುದು.
3. ಅರ್ಹ ಮತ್ತು ಆಂಗೀಕೃತ ವೈದ್ಯಕೀಯ ಅರ್ಹತೆಗಳೊಂದಿಗೆ ವೈದ್ಯರಿಗೆ ಖಾಯಂ ಹಾಗೂ ತಾತ್ಕಾಲಿಕ ರಿಜಿಸ್ಟ್ರೇಷನ್ ನೀಡುವುದು.
4. ವೈದ್ಯಕೀಯ ಅರ್ಹತೆಗಳಿಗೆ ಮಾನ್ಯತೆ ನೀಡುವ ಸಂಬಂಧ ವಿದೇಶಿ ಸಂಸ್ಥೆಯ ಜತೆಗೆ ಸಂವಹನ ಹೊಂದುವುದು.

ಎಂಸಿಐ ಸ್ಕ್ರೀನಿಂಗ್ ಟೆಸ್ಟ್: ಭಾರತ ಹೊರತುಪಡಿಸಿ ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಅರ್ಹತಾ ಪರಿಕ್ಷೆ ನಡೆಸುವ ವ್ಯವಸ್ಥೆಯನ್ನು 2002ರಲ್ಲಿ ಆರಂಭಿಸಲಾಯಿತು.
ಭಾರತದ ವೈದ್ಯಕೀಯ ಮಂಡಳಿಯ ಸ್ಕ್ರೀನಿಂಗ್ ಪರೀಕ್ಷೆಯನ್ನು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆ ಎಂದೂ ಕರೆಯಲಾಗುತ್ತದೆ. ಇದನ್ನು ಭಾರತದ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಿರ್ವಹಿಸುತ್ತದೆ.
ಭಾರತೀಯ ನಾಗರಿಕರು ವಿದೇಶಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಭಾರತದಲ್ಲಿ ಸೇವೆ ನಡೆಸಲು ಬರುವವರಿಗೂ ಈ ಪರೀಕ್ಷೆ ಕಡ್ಡಾಯ.
ಮೂಲಭೂತ ವೈದ್ಯಕೀಯ ಪದವಿಯನ್ನು ಯಾವುದೇ ದೇಶದಿಂದ ಪಡೆದಿದ್ದರೂ, ಭಾರತದಲ್ಲಿ ವೈದ್ಯಕೀಯ ವೃತ್ತಿ ನಿರ್ವಹಿಸಬೇಕಾದರೆ ಈ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಜತೆಗೆ ಆ ವೈದ್ಯಕೀಯ ಶಿಕ್ಷಣ ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆಯ ಅಂತರರಾಷ್ಟ್ರೀಯ ಡೈರೆಕ್ಟರಿಯಲ್ಲಿ ದಾಖಲಾಗಿರಬೇಕು.

ಎಂಸಿಐನಿಂದ ಮಾನ್ಯತೆ ಪಡೆದಿರುವ ವಿವಿಗಳ ಹೆಸರು ಹಾಗೂ ಮಾಹಿತಿಗಾಗಿ http://www.mciindia.org ವೆಬ್ ಸೈಟ್ ಗೆ ಭೇಟಿ ನೀಡಬಹುದು.

ಹೆಚ್ಚಿನ ಮಾಹಿತ�

share
ವಾರ್ತಾಭಾರತಿ
ವಾರ್ತಾಭಾರತಿ
Next Story
X