ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ

ಹೊಸದಿಲ್ಲಿ, ಆ.4: ಮರಣವನ್ನು ನೋಂದಣಿಗೊಳಿಸುವ ಸಂದರ್ಭ ಆಧಾರ್ ನಂಬರ್ ನೀಡುವುದನ್ನು ಅಕ್ಟೋಬರ್ 1ರಿಂದ ಸರಕಾರ ಕಡ್ಡಾಯಗೊಳಿಸಿದೆ ಎಂಬ ವರದಿಗಳನ್ನು ಕೇಂದ್ರ ಸರಕಾರ ನಿರಾಕರಿಸಿದೆ. ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ ಎಂದು ಅದು ಸ್ಪಷ್ಪಪಡಿಸಿದೆ.
ಮರಣ ಹೊಂದಿದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಆಧಾರ್ ನಂಬರ್ ಅಗತ್ಯವಾಗಿದೆ. ಆದ್ದರಿಂದ ಮರಣ ನೋಂದಣಿಗೆ ಆಧಾರ್ ಸಂಖ್ಯೆಯನ್ನು ಅಕ್ಟೋಬರ್ 1ರಿಂದ ಗೃಹ ಸಚಿವಾಲಯ ಕಡ್ಡಾಯಗೊಳಿಸಿದೆ ಎಂದು ಈ ಮೊದಲು ವರದಿಯಾಗಿತ್ತು.
Next Story





