ಸಾಲ ಭಾದೆ ತಾಳಲಾರದೆ ರೈತ ಆತ್ಮಹತ್ಯೆ
ಗುಂಡ್ಲುಪೇಟೆ,ಆ.5: ಸಾಲಬಾಧೆಯಿಂದ ಹತಾಶನಾದ ರೈತ ವಿಷ ಕುಡಿದು ಸಾವಿಗೆ ಶರಣಾಗಿರುವ ಘಟನೆ ತಾಲೂಕಿನ ಅಣ್ಣುರುಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜವರೇಗೌಡ ಎಂಬುವರ ಮಗ ಮಾದೇಗೌಡ(68) ಸಾವಿಗೀಡಾದ ದುರ್ದೈವಿ. 11.5 ಎಕರೆ ಜಮೀನು ಹಾಗೂ 4 ಕೊಳವೆ ಬಾವಿಗಳನ್ನು ಹೊಂದಿದ್ದ ರೈತ ಸಹಕಾರ ಸಂಘ ಹಾಗೂ ಹೊರಗೆ ಸೇರಿದಂತೆ ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಮಳೆ ಬೀಳದೆ ಕೊಳವೆಬಾವಿಯಲ್ಲಿ ನೀರು ದೊರಕದೆ ಹತಾಶರಾಗಿದ್ದು ಶನಿವಾರ ಮುಂಜಾನೆ ತಮ್ಮ ಜಮೀನಿನಲ್ಲಿ ವಿಷ ಕುಡಿದು ಸಾವಿಗೆ ಶರಣಾಗಿದ್ದಾರೆ.
ಈ ಬಗ್ಗೆ ಮೃತರ ಪತ್ನ್ ಮೀನಾಕ್ಷಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಶಾಸಕಿ ಡಾ.ಗೀತಾಮಹದೇವಪ್ರಸಾದ್, ಕೊಳ್ಳೇಗಾಲ ಉಪವಿಭಾಗಾಧಿಕಾರಿ ರೂಪಾ. ತಹಸೀಲ್ದಾರ್ ಕೆ.ಸಿದ್ದು, ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರ ವಶಕ್ಕೆ ನೀಡಲಾಯಿತು.
ಪಟ್ಟಣದ ಕೆ ಎಸ್ ಎನ್ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.







