ಅಪರೂಪದ ಬಿಳಿಬಣ್ಣದ ಹಾವಿನ ರಕ್ಷಣೆ

ಗುಂಡ್ಲುಪೇಟೆ,ಆ.5 : ತಾಲೂಕಿನ ಸೋಮಹಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯದ ಬಳಿ ಕಾಣಿಸಿಕೊಂಡ ಅಪರೂಪದ ಬಿಳಿಬಣ್ಣದ ಉಲ್ಫ್ ಜಾತಿಗೆ ಸೇರಿದ ಹಾವನ್ನು ಸ್ನೇಕ್ ಶಶಿ ರಕ್ಷಿಸಿದ್ದಾರೆ.
ಗ್ರಾಮದ ಗ್ರಾ.ಪಂ ಕಾರ್ಯಾಲಯದ ಬಳಿ ಈ ಅಪರೂಪದ ಹಾವನ್ನು ನೋಡಿದ ಜನರು ಸ್ನೇಕ್‍ಶಶಿರವರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕೆ ತೆರಳಿದ ಶಶಿ ಹಾವನ್ನು ರಕ್ಷಿಸಿದ್ದು ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ತಿಳಿಸಿದ್ದಾರೆ.
Next Story





