ವಾಲ್ಪಾಡಿ: ಮದರಸ ವಿದ್ಯಾರ್ಥಿಗಳ ಪೋಷಕರ ಸಭೆ
ಮೂಡುಬಿದಿರೆ, ಆ.5: ಇಲ್ಲಿನ ವಾಲ್ಪಾಡಿಯ ಮುಹಿಯುದ್ದೀನ್ ಜುಮ್ಮಾ ಮಸೀದಿ ನೂರುಲ್‍ಹುದಾ ಮದರಸದ ವಿದ್ಯಾರ್ಥಿಗಳ ಪೋಷಕರ ಸಭೆಯು ಇತ್ತೀಚಿಗೆ ನಡೆಯಿತು.
ಮಸೀದಿಯ ಖತೀಬರಾದ ಅಬ್ದುಲ್ಲ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಮದರಸದ ಮುದರ್ರಿಸರಾದ ಜಮಾಲ್ ಮದನಿ ಆತೂರ್ ಅವರು `ಮದರಸ ವಿದ್ಯಾಭ್ಯಾಸ, ಪೋಷಕರ ಜವಾಬ್ದಾರಿ, ಮಕ್ಕಳ ತಾಯಿಯ ಕರ್ತವ್ಯ , ಅಧ್ಯಾಪಕರ ಜವಾಬ್ದಾರಿ’ ಕುರಿತು ಮಾತನಾಡಿದರು.
ಮಸೀದಿ ಕಮಿಟಿಯ ಅಧ್ಯಕ್ಷ ಅಬ್ದುಲ್ ಹಮೀದ್, ಕಾರ್ಯದರ್ಶಿ ಝಕರಿಯ್ಯಾ ಯೂಸುಫ್, ಗೌರವಾಧ್ಯಕ್ಷ ಮುಹಮ್ಮದ್ ದೋಣಿಬಾಗಿಲು, ಇಸ್ಮಾಯಿಲ್ ಮುಸ್ಲಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಬ್ದುಲ್ ಅಝೀಝ್, ಇಬ್ರಾಹಿಂ, ಖಾದರ್ ದೋಣಿಬಾಗಿಲು, ಉಬೈದುಲ್ಲ, ಶರೀಫ್, ಹಮೀದ್ ಮಾಂಟ್ರಾಡಿ, ಇಬ್ರಾಹಿಂ ಕಜೆ, ಎಸ್.ಎಚ್.ಹುಸೇನ್, ಸೂಫಿ ಕುಂಞಿ, ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನಿತ್ತರು.
Next Story





