ಕಳಸಾ ಬಂಡೂರಿ ಗಲಭೆ ಪ್ರಕರಣ: ವಿಚಾರಣೆ ಸೆ.26ಕ್ಕೆ ಮುಂದೂಡಿಕೆ
ಹುಬ್ಬಳ್ಳಿ, ಆ.5: ಮಹಾದಾಯಿ, ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ಸರಕಾರಿ ಬಸ್‌ಗೆ ಕಲ್ಲು ಎಸೆದು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ 6 ಜನ ಹೋರಾಟಗಾರರು ವಿಚಾರಣೆಗೆ ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣೆಯನ್ನು ಸೆ.26ಕ್ಕೆ ಮುಂದೂಡಿದೆ. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ನವಲಗುಂದ ತಾಲೂಕಿನ ಬ್ಯಾಲ್ಯಾಳದ 4 ಜನ ಮತ್ತು ತೀರ್ಲಾಪೂರದ 2 ಜನ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕಳಸಾ ಬಂಡೂರಿ ಹೋರಾಟಗಾರರಾದ ಸತೀಶ ಕುಮಾರ ಚಿಕ್ಕಮಠ, ಉಮೇಶ್ ನೇಗಿಹಾಳ, ಅರ್ಜುನಪ್ಪ ತುರಮರಿ, ದೇವಪ್ಪ ಹಡಪದ, ಜಗದೀಶ ಶೆಟ್ಟರ್ ಹಾಗೂ ಸಿದ್ದಪ್ಪ ಮುದಿಸಿದ್ದಣ್ಣವರ್ ಕೋರ್ಟ್‌ಗೆ ಹಾಜರಾದ ಹೋರಾಟಗಾರರು.
Next Story





