ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ
ಉಡುಪಿ, ಆ.5: ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾತೃಪೂರ್ಣ ಯೋಜನೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘ ಆ.9ರಂದು ಒಂದು ದಿನದ ಮುಷ್ಕರ ನಡೆಸುತಿದ್ದು, ಇದಕ್ಕೆ ಉಡುಪಿ ತಾಲೂಕು ಅಂಗನವಾಡಿ ಮತ್ತು ಸಹಾಯಕಿಯರ ಸಂಘ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ ಎಂದು ಸಂಘದ ಅಧ್ಯಕ್ಷೆ ಯಮುನಾ ಆರ್.ಕುಂದರ್, ಕಾರ್ಯದರ್ಶಿ ವೇದಾವತಿ, ಕೋಶಾಧಿಕಾರಿ ಬೇಬಿ ಶೆಟ್ಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇಲಾಖೆಯ ಯೋಜನೆಯು ಗೊಂದಲಮಯವಾಗಿದ್ದು, ಇದೊಂದು ಸಮರ್ಪಕ ಯೋಜನೆಯಲ್ಲವೆಂಬುದು ಸಂಘದ ಅಭಿಪ್ರಾಯವಾಗಿದೆ. ಆದರೆ ಆ ದಿನದಂದು ತಾಲೂಕಿನ ಅಂಗನವಾಡಿ ಕೇಂದ್ರಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





