Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕನ್ನಡ ಕಾವ್ಯ ಮೀಮಾಂಸೆ

ಕನ್ನಡ ಕಾವ್ಯ ಮೀಮಾಂಸೆ

ಸಾಂಸ್ಕೃತಿಕ ರಾಜಕಾರಣದ ಸಮರ್ಥ ಅನಾವರಣ

ಡಾ. ಎನ್.ಜಗದೀಶ್ ಕೊಪ್ಪಡಾ. ಎನ್.ಜಗದೀಶ್ ಕೊಪ್ಪ5 Aug 2017 8:26 PM IST
share
ಕನ್ನಡ ಕಾವ್ಯ ಮೀಮಾಂಸೆ

ಕನ್ನಡದ ಶ್ರೇಷ್ಠ ಸಂಸ್ಕೃತಿ ಚಿಂತಕರಲ್ಲಿ ಒಬ್ಬರಾದ ಡಾ.ನಟರಾಜ್ ಬೂದಾಳು ಅವರ ‘‘ಕನ್ನಡ ಕಾವ್ಯ ಮೀಮಾಂಸೆ’’ ಕೃತಿಯು ಇತ್ತೀಚೆಗಿನ ದಿನಗಳಲ್ಲಿ ಕನ್ನಡಕ್ಕೆ ಬಂದ ಮಹತ್ವದ ವಿದ್ವತ್‌ಪೂರ್ಣ ಅಧ್ಯಯನ ಕೃತಿಯಾಗಿದೆ. ತಮ್ಮ ಬದುಕನ್ನು ಬೌದ್ಧ ಧರ್ಮದ ತತ್ವ ಮತ್ತು ಸಿದ್ಧಾಂತಗಳಿಗೆ, ನಾಗಾರ್ಜುನ ಮತ್ತು ಅಲ್ಲಮಪ್ರಭು ಕುರಿತ ಅಧ್ಯಯ ನಕ್ಕೆ ಹಾಗೂ ನಾಡಿನುದ್ದಕ್ಕೂ ಜನಪದರ ಎದೆಯೊಳಗೆ ದಾಖಲಾಗಿರುವ ಅಲಿಖಿತ ಪಠ್ಯಗಳಾದ ತತ್ವಪದಗಳ ಸಂಗ್ರಹ ಮತ್ತು ವಿಶ್ಲೇಷಣೆಗೆ ನಟರಾಜ ಬೂದಾಳರು ಮೀಸಲಾಗಿಟ್ಟಿದ್ದಾರೆ. ಸತತ ಹತ್ತು ವರ್ಷಗಳ ಕಾಲದ ತಮ್ಮ ವಸ್ತು ನಿಷ್ಠ ಅಧ್ಯಯನದ ಮೂಲಕ ಭಾರತೀಯ ಕಾವ್ಯ ಮೀಮಾಂಸೆಗೆ ಪರ್ಯಾಯವಾಗಿ ಕನ್ನಡದ ಕಾವ್ಯ ಮೀಮಾಂಸೆಯ ಮಾದರಿಯನ್ನು ಇದೀಗ ನಮ್ಮ ಎದುರಿಗಿಟ್ಟಿದ್ದಾರೆ.

ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿರುವ ಈ ಕೃತಿಯು ಕನ್ನಡದ ದೇಶಿ ಚಿಂತನೆಗೆ ಮಹತ್ವದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಕನ್ನಡದ ಬೌದ್ಧಿಕ ಜಗತ್ತನ್ನು ತಮ್ಮ ಚಿಂತನೆಗಳ ಮೂಲಕ ವಿಸ್ತರಿಸಿದ ಡಾ.ಡಿ.ಆರ್. ನಾಗರಾಜು ಅವರ ನಂತರ ಮುಂದುವರಿದ ದೇಶಿ ಚಿಂತನೆ ಶೋಧ ಎಂದು ಕರೆಯಬಹುದಾದ ಈ ಕೃತಿಯನ್ನು ದಿವಂಗತ ಡಿ.ಆರ್. ನಾಗರಾಜು ಅವರ ‘‘ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ’’ ಕೃತಿಯ ಮುಂದುವರಿದ ಚಿಂತನೆಯ ಭಾಗವೆಂದು ಧಾರಾಳವಾಗಿ ಹೇಳಬಹುದಾಗಿದೆ.

ಭಾರತೀಯ ಕಾವ್ಯ ಮೀಮಾಂಸೆಯೆಂದು ಕರೆಯಲಾ ಗುವ ಉತ್ತರದ ಸಂಸ್ಕೃತ ಕಾವ್ಯ ಮೀಮಾಂಸೆಯ ಕಣ್ಣಲ್ಲಿ ಕನ್ನಡವನ್ನೂ ಒಳಗೊಂಡಂತೆ ಭಾರತೀಯ ಇತರ ಭಾಷೆಗಳ ಕಾವ್ಯವನ್ನು ವ್ಯಾಖ್ಯಾನಿಸುವ ಪದ್ಧತಿ ಬಹಳ ಕಾಲದಿಂದಲೂ ರೂಢಿಯಲ್ಲಿದೆ. ಉತ್ತರ ಭಾರತದ ಸಂಸ್ಕೃತ ಭಾಷೆ ಮತ್ತು ಅದರ ಮೀಮಾಂಸೆಗೆ ಪ್ರತಿಯಾಗಿ ದಕ್ಷಿಣ ಭಾರತದಲ್ಲಿ ಎರಡು ಸಾವಿರ ವರ್ಷಗಳ ಹಿಂದೆ ಹುಟ್ಟಿಕೊಂಡ ದ್ರಾವಿಡ ಭಾಷೆಗಳಾದ ತಮಿಳು ಮತ್ತು ಕನ್ನಡದಲ್ಲಿ ಕಾವ್ಯ ಸೃಷ್ಟಿಯಿಂದ ಹಿಡಿದು, ವ್ಯಾಖ್ಯಾ ನಿಸುವ ನಮ್ಮದೇ ಆದ ಪರಿಕರಗಳು ಅಥವಾ ಮಾನದಂಡಗಳಿದ್ದವು.

ಆದರೆ, ಉತ್ತರದ ಸಾಂಸ್ಕೃತಿಕ ರಾಜಕಾರಣ ಮತ್ತು ಪ್ರಾದೇಶಿಕ ಭಾಷೆಗಳ ಕುರಿತಾದ ಕೀಳರಿಮೆಯ ಪ್ರಜ್ಞೆಯಿಂದಾಗಿ ನಾವಿನ್ನೂ ಸಂಸ್ಕೃತದ ಭಾರತೀಯ ಕಾವ್ಯ ಮೀಮಾಂಸೆಯ ನೆರಳಲ್ಲಿ ಸಾಗುತ್ತಿದ್ದೇವೆ. ಇದಕ್ಕೆ ಪರ್ಯಾಯವಾಗಿ ಹೊಸಚಿಂತನೆ ಮತ್ತು ಮಾರ್ಗಗಳನ್ನು ನಟರಾಜ ಬೂದಾಳು ಕನ್ನಡಿಗರ ಮುಂದಿರಿಸಿದ್ದಾರೆ.

ಲೇಖಕರೇ ಈ ಕೃತಿಯಲ್ಲಿ ಹೇಳುವ ‘‘ಮೀಮಾಂಸೆ ಯೆಂಬುದು ಮೂಲತಃ ಲೋಕವನ್ನು ನೋಡುವ ಕಣ್ಣು, ಬದುಕುವ ಜಗತ್ತನ್ನು ಬದುಕಿನ ಸ್ವರೂಪಕ್ಕೆ ಅದರ ಅಗತ್ಯಕ್ಕೆ ಅನುಸಾರವಾಗಿ ವಿವರಿಸಿಕೊಳ್ಳುವ ಒಂದು ಕ್ರಮ. ಮೀಮಾಂಸೆಯ ದಾರಿ ಮತ್ತು ಪ್ರಭುತ್ವದ ದಾರಿ ಬೇರೆಯಾಗಿರುವುದಿಲ್ಲ. ಕವಿರಾಜ ಮಾರ್ಗ ಕೃತಿಯು ಇದನ್ನೇ ಸೂಚಿಸುತ್ತದೆ. ಆದರೆ, ಜೀವನ ಕ್ರಮಗಳನ್ನು ನಿಯಂತ್ರಿಸುವ ಮೂಲಕ ಅಧಿಕಾರ ಕೇಂದ್ರಗಳು ತಮ್ಮ ಅಧಿಕಾರವನ್ನು ರೂಢಿಸಿಕೊಳ್ಳುವುದರಿಂದ ಸಹಜವಾಗಿ ಕಾವ್ಯ ಮೀಮಾಂಸೆ ಮತ್ತು ಜೀವನ ಮೀಮಾಂಸೆಗಳು ಅಧಿಕಾರದ ಆಯುಧಗಳಾಗಿವೆ. ಏಕಕೇಂದ್ರಿತ ಪ್ರಾಬಲ್ಯವನ್ನು ಸ್ಥಾಪಿಸಬಯಸುವ ಸಂಸ್ಕೃತ ಕಾವ್ಯ ಮೀಮಾಂಸೆಯು ಸ್ಥಳೀಯ ಕಾವ್ಯ ಮೀಮಾಂಸೆ ಮತ್ತು ಜೀವನ ಕ್ರಮಗಳ ಮೇಲೆ ಅಧಿಕಾರ ತೋರುತ್ತಾ ಬಂದಿದೆ’’ ಎಂಬ ಮಾತುಗಳು ನಮ್ಮ ಜೀವನ ಕ್ರಮ, ದೇಶಿ ಸಂಸ್ಕೃತಿಯ ಚಿಂತನೆ ಹಾಗೂ ನಮ್ಮ ನಡುವಿನ ಮಲೆ ಮಹದೇಶ್ವರನ ಕಾವ್ಯ, ಮಂಟೆ ಸ್ವಾಮಿ ಕಾವ್ಯ, ಜುಂಜಪ್ಪನ ಕಾವ್ಯ, ಶರಣರ ವಚನಗಳು ಮತ್ತು ಅಸಂಖ್ಯಾತ ತತ್ವ ಪದಕಾರರ ತತ್ವದ ಪದಗಳನ್ನು ಕನ್ನಡ ಕಾವ್ಯ ಮೀಮಾಂಸೆಯ ದೃಷ್ಟಿ ಕೋನದಲ್ಲಿ ನೋಡುವಂತೆ, ಗ್ರಹಿಸುವಂತೆ ಮತ್ತು ವ್ಯಾಖ್ಯಾನಿಸುವಂತೆ ಪ್ರೇರೇಪಿಸುತ್ತವೆ.

ಈ ಕೃತಿಯು ಕನ್ನಡದ ಮನಸ್ಸುಗಳಿಗೆ ಮುಖ್ಯ ವಾದ ಹಾಗೂ ಸಂಶೋಧನೆಗೆ ಮಾದರಿಯಾದ ಪಠ್ಯವಾಗಿದೆ. ಏಕೆಂದರೆ, ಇಲ್ಲಿ ಕಾವ್ಯ ಮೀಮಾಂಸೆ ಕುರಿತಂತೆ ಲೇಖಕರು ಸಾವಧಾನವಾಗಿ ಚಿಂತಿಸಿ ಕಟ್ಟಿಕೊಟ್ಟಿರುವ ಚಿಂತನೆಗಳು ನಾವು ಮರೆತು ಹೋಗಿರುವ ಮಾರ್ಗಕ್ಕೆ ಕೈ ದೀವಿಗೆಯಂತೆ ಕಾಣುತ್ತವೆ. ಸಮೂಹವೊಂದರ ಬದುಕಿನ ಶೈಲಿ ರೂಪುಗೊಳ್ಳುವುದು ಸುತ್ತಲಿನ ನಿಸರ್ಗಕ್ಕೆ ಅನುಗುಣವಾಗಿಯೋ ಅಥವಾ ಕಾಲ್ಪನಿಕ ನಂಬಿಕೆಯನ್ನಾಧರಿಸಿಯೋ ಎಂಬ ಪ್ರಶ್ನೆಗೆ ಶ್ರಮಣ ಕಾವ್ಯ ಮೀಮಾಂಸೆಯು ನಿಸರ್ಗ ಎಂದು ಉತ್ತರಿಸಿದರೆ, ಸಂಸ್ಕೃತ ಕಾವ್ಯ ಮೀಮಾಂಸೆಯು ಸೃಷ್ಟಿಯ ಬಗೆಗಿನ ನಂಬಿಕೆಯನ್ನಾಧರಿಸಿ ಎಂದು ಉತ್ತರಿಸುತ್ತದೆ. ಇದನ್ನು ಆಳವಾಗಿ ಆಲೋಚಿಸಿದರೆ, ದೇಶಿ ಕಾವ್ಯ ಮೀಮಾಂಸೆಯು ಹೆಚ್ಚು ವಾಸ್ತವಿಕವಾಗಿದೆ. ಇದು ಬುದ್ಧನ ಚಿಂತನೆಯ ಮಾದರಿ ಕೂಡ ಹೌದು. ಏಕೆಂದರೆ, ಅವನು ಕಣ್ಣ ಮುಂದಿನ ವಾಸ್ತವವನ್ನು ಹೊರತುಪಡಿಸಿ ಅಂದರೆ, ಇಹಲೋಕದ ವ್ಯವಹಾರಗಳನ್ನು ಹೊರತುಪಡಿಸಿ, ಕಲ್ಪನಾ ಲೋಕ ಅಥವಾ ಊಹೆಗಳ ಆಧಾರಿತ ಎಲ್ಲಾ ನಂಬಿಕೆಗಳನ್ನು ತಿರಸ್ಕರಿಸಿದವನು. ಭಾರತೀಯ ಕಾವ್ಯ ಮೀಮಾಂಸೆಯು ರೂಪ, ರಸ, ಸ್ಪರ್ಶ ಇವುಗಳ ಕುರಿತು ವಿವೇಚಿಸಿದರೆ, ದೇಶಿ ಕಾವ್ಯ ಮೀಮಾಂಸೆಯು ಇದನ್ನು ಮೀರಿ; ದೇಹ, ಶ್ರಮ, ನಡೆ ಮತ್ತು ನುಡಿಗಳನ್ನು ಕುರಿತು ವಿವೇಚಿಸುತ್ತದೆ.

ಇದನ್ನು ಡಿ.ಆರ್. ನಾಗರಾಜ್ ಅವರು ‘‘ಕನ್ನಡದ ಭಾಷೆಯೊಳಗಿನ ದಂಗೆಯ ದನಿ ಎದ್ದರೆ, ಅದು ಕಲ್ಯಾಣದ ಜತೆಗೆ ಮಾತನಾಡಬೇಕು. ಅದು ಕನ್ನಡ ಭಾಷೆಯ ಚಾರಿತ್ರಿಕ ವಿಧಿ’’ ಎಂದು ತಮ್ಮ ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಕೃತಿಯಲ್ಲಿ ಹೇಳಿದ್ದಾರೆ. ಇದರ ಮುಂದುವರಿದ ಭಾಗ ವಾಗಿ ನಟರಾಜ ಬೂದಾಳು ಅವರು ಪ್ರಾದೇಶಿಕ ನೆಲೆಯಲ್ಲಿ ಉತ್ತರದ ಸಾಂಸ್ಕೃತಿಕ ರಾಜಕಾರಣಕ್ಕೆ ಪ್ರತಿಯಾಗಿ ಅನೇಕ ಮಾದರಿಗಳನ್ನು ಈ ಕೃತಿಯ ಮೂಲಕ ನಮ್ಮ ಮುಂದಿಟ್ಟು ಅಂತಹ ದಂಗೆಯ ದನಿಗಳನ್ನು ಗುರುತಿಸಿದ್ದಾರೆ. ಹಾಗಾಗಿ ಈ ಕೃತಿಯು ಕನ್ನಡ ಸಾಂಸ್ಕೃತಿಕ ಜಗತ್ತಿಗೆ ಮಹತ್ವದ ಕೃತಿ ಮಾತ್ರವಲ್ಲದೆ ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಮತ್ತಷ್ಟು ವಿಸ್ತರಿಸಬಲ್ಲ ಗುಣವನ್ನೂ ಸಹ ಪಡೆದುಕೊಂಡಿದೆ.

share
ಡಾ. ಎನ್.ಜಗದೀಶ್ ಕೊಪ್ಪ
ಡಾ. ಎನ್.ಜಗದೀಶ್ ಕೊಪ್ಪ
Next Story
X