ಜುಗಾರಿ: ನಾಲ್ವರ ಬಂಧನ
ಬೈಂದೂರು, ಆ.5: ಪಡುವರಿ ಗ್ರಾಮದ ರಾಘವೇಂದ್ರ ಮಠದ ಬಳಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಯಡ್ತರೆ ಗ್ರಾಮದ ಮಹೇಶ್(28), ಪಡುವರಿ ಗ್ರಾಮದ ರೋಹಿತ್(25), ಶಿರೂರು ಗ್ರಾಮದ ಜಾವೇದ್(34), ಮದ್ದೋಡಿಯ ನಾಗೇಶ(29) ಎಂಬ ವರನ್ನು ಪೊಲೀಸರು ಬಂಧಿಸಿ, 1,420 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





