ಉಡುಪಿ: ಸಾಗುವಾನಿ ಮರ ವಶ, ಇಬ್ಬರ ಬಂಧನ

ಉಡುಪಿ, ಆ.5: ನಗರದ ಇನ್ನಂಜೆ ರೈಲ್ವೆ ನಿಲ್ದಾಣದ ಬಳಿ ಸಾಗುವಾನಿ ಮರವನ್ನು ಅಕ್ರಮವಾಗಿ ಕತ್ತರಿಸಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಇನ್ನಂಜೆಯ ಗುಣಕರ ಮಂಡೇಡಿ ಹಾಗೂ ಪಾಂಗಾಳ ಸರಸ್ವತಿ ನಗರದ ಸಂಪತ್ ಎಂದು ಗುರುತಿಸಲಾಗಿದೆ. ಇವರನ್ನು ರೈಲ್ವೆ ರಕ್ಷಣಾ ದಳ ನಿರೀಕ್ಷಕ ಶಿವರಾಮ ರಾಥೋಡ್, ಉಪ ನಿರೀಕ್ಷಕ ಸಂತೋಷ್ ಗಾಂವಕರ್ ಹಾಗೂ ಸಿಬ್ಬಂದಿಗಳಾದ ಆಶ್ವಥ್, ಗುರುರಾಜ್, ವೇಣು ಮತ್ತು ಲೋಬೊ ಬಂಧಿಸಿದ್ದು, ಒಟ್ಟು 50,000 ರೂ. ಬೆಲೆ ಬಾಳುವ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





