ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳಲ್ಲಿರುವ ರೈತರ ಸಾಲ ಮನ್ನಾಕ್ಕೆ ಒತ್ತಾಯ

ಚಿಕ್ಕಮಗಳೂರು, ಆ.5: ರೈತರು ಸತತ 4 ವರ್ಷಗಳಿಂದ ನಿರಂತರ ಬರಗಾಲಕ್ಕೆ ಸಿಲುಕಿ ನರಳುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳಲ್ಲಿರುವ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ರೈತ ಸಂಘ ಶನಿವಾರ ಒತ್ತಾಯಿಸಿದೆ.
ನಗರದ ಪ್ರೆಸ್‍ಕ್ಲನಲ್ಲಿ ಪತ್ರಿಕಾಗೊಷ್ಟಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ ಮಾತನಾಡಿ, ರೈತರು ಕಳೆದ ಮೂರು ವರ್ಷಗಳಿಂದ ನಿರಂತರ ಬರಗಾಲಕ್ಕೆ ಸಿಲುಕಿ ನರಳು ತ್ತಿದ್ದಾರೆ. ಈ ವರ್ಷವು ಬರಗಾಲ ಮುಂದುವರೆಯುವ ಎಲ್ಲಾ ಲಕ್ಷಣಗ ಳಿವೆ. ಮಳೆ ಕೈಕೊಟ್ಟ ಕಾರಣ ಬೆಳೆ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲ ತೀರಿಸಲಾಗದೇ ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ. ಇದನ್ನು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ವಿಫಲ ಗೊಂಡಿವೆ ಎಂದು ಆರೋಪಿಸಿದರು.
ರೈತರ ರಕ್ಷಣೆಗೆ ಫಸಲ್ ಭೀಮಾ ಯೋಜನೆ ಜಾರಿಗೆ ತಂದಿದ್ದರೂ ರೈತರ ಸಂಕಷ್ಟಗಳಿಗೆ ನೆರವಾಗದೇ ವಿಮಾ ಕಂಪನಿಗಳಿಗೆ ಲಾಭವಾಗು ವಂತೆ ಕೇಂದ್ರ ಸರ್ಕಾರ ಅವಕಾಶ ಮಾಡಿದೆ ಎಂದು ಆರೋಪಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಹೇಶ್ ಮಾತನಾಡಿ, ಜಿಲ್ಲೆಯ ಬಯಲುನಾಡಿನ ಭಾಗದಲ್ಲಿ ಕಳೆದ 4 ವರ್ಷಗಳಿಂದ ರೈತರು ಬೆಳೆಯನ್ನೇ ಕಂಡಿಲ್ಲ. ತೆಂಗು ಹಾಗೂ ಅಡಿಕೆ ಸಂಪೂರ್ಣ ಹಾಳಾಗಿದೆ. ಮಲೆನಾಡು ಭಾಗದಲ್ಲಿ ಬಂದ ಅಲ್ಪಸ್ವಲ್ಪ ಕಾಫಿ ಮತ್ತು ಮೆಣಸು ಬೆಳೆ ಬೆಲೆಕುಸಿತದಿಂದ ಹಾಕಿದ ಬಂಡವಾಳ ಸಿಗದೇ ನಷ್ಟವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಭೀಕರ ಬರಗಾಲ ಮುಂದುವರೆದಿದ್ದರೂ ಜನ ಮತ್ತು ಜಾನುವಾರುಗಳಿಗೆ ನೀರು ಹಾಗೂ ಮೇವು ಸಮರ್ಪಕವಾಗಿ ಪೂರೈಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪಂಚನಹಳ್ಳಿಯಲ್ಲಿ ತೆರೆದಿದ್ದ ಗೋಶಾಲೆಯನ್ನು ಮುಚ್ಚಲಾಗಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಡಾ|| ಎಂ.ಎಸ್.ಸ್ವಾಮಿನಾಥನ್ ವರದಿಯ ಲ್ಲಿ ಶಿಫಾರಸ್ಸು ಮಾಡಿರುವಂತೆ ಬೆಳೆ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಲಾಭವನ್ನು ಸೇರಿಸಿ ಬೆಲೆ ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ನಾಗರಾಜು, ತಾಲ್ಲೂಕು ಅಧ್ಯಕ್ಷ ಎಂ. ಮಂಜೇಗೌಡ, ಓಂಕಾರಪ್ಪ, ಬಸವ ರಾಜಪ್ಪ ಮತ್ತಿತರರಿದ್ದರು.
‘ರೈತರ ಆತ್ಮಹತ್ಯೆಗಳಿಗೆ ಮತ್ತು ದಿವಾಳಿತನಕ್ಕೆ ಕಾರಣವಾಗಿರುವ ಆಮದು ನೀತಿ, ಬೆಲೆಕುಸಿತ, ಮಾರು ಕಟ್ಟೆ ಅವ್ಯವಸ್ಥೆ, ವಿದ್ಯುತ್ ನೀತಿ, ಸಾಲ ನೀತಿ, ಕಾಡುಪ್ರಾಣಿಗಳ ಹಾವಳಿ, ನಕಲಿ ರಸಗೊಬ್ಬರ ಮತ್ತು ಕೀಟನಾಶಕ ಹಾಗೂ ಬೆಳೆವಿಮಾ ನೀತಿಗಳೇ ಪ್ರಮುಖ ಕಾರಣವಾಗಿದ್ದು, ಆತ್ಮಹತ್ಯೆ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಶೇ.90 ರಷ್ಟಿರುವ ಸಣ್ಣ ಹಾಗೂ ಮಧ್ಯಮವರ್ಗದ ರೈತರು ವಾಣಿಜ್ಯಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳ ಕಿರುಕುಳ ತಪ್ಪಿಸಿಕೊಳ್ಳಲು ಖಾಸಗಿ ಲೇವಾದೇವಿದಾರರ ದುಬಾರಿ ಬಡ್ಡಿ ಪಡೆದು ಬ್ಯಾಂಕ್‍ಗಳಿಗೆ ಪ್ರತಿ ವರ್ಷ ಬಡ್ಡಿ ತುಂಬಿಸಿ ಖಾಸಗೀ ಲೇವಾದೇವಿದಾರರ ಮತ್ತು ಬ್ಯಾಂಕ್ ಗಳ ಎರಡುಕಡೆ ಸಾಲ ತೀರಿಸಲಾರದ ಸ್ಥಿತಿಯಲ್ಲಿದ್ದಾರೆ’
ಡಿ.ಆರ್.ದುಗ್ಗಪ್ಪಗೌಡ, ಜಿಲ್ಲಾಧ್ಯಕ್ಷ, ರೈತಸಂಘ, ಚಿಕ್ಕಮಗಳೂರು.







