ಐಸಿಸ್‌ಗೆ ಬೆಂಬಲ ಪ್ರಕರಣ: ಮತ್ತಿಬ್ಬರ ವಿಚಾರಣೆ

ಕೊಯಂಬತ್ತೂರು, ಆ.5: ಐಸಿಸ್ ಕೃತ್ಯವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಬರಹಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ನಗರದ ಮತ್ತಿಬ್ಬರು ವ್ಯಕ್ತಿಗಳನ್ನು ರಾಷ್ಟ್ರೀಯ ತನಿಖಾ ಸಮಿತಿ(ಐಎನ್‌ಎ) ವಿಚಾರಣೆ ನಡೆಸಿದೆ.
ಐಸಿಸ್ ಕೃತ್ಯವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಬರಹಗಳನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಎರಡು ದಿನದ ಹಿಂದೆ ನಗರದ ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡ ಎನ್‌ಐ, ಅವರನ್ನು ವಿಚಾರಣೆಗಾಗಿ ಕೊಚ್ಚಿಗೆ ಕರೆದೊಯ್ದಿತ್ತು. ಅಲ್ಲದೆ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.
ಇದೀಗ ಇವರ ಆತ್ಮೀಯ ಸ್ನೇಹಿತರು ಎಂದು ಹೇಳಲಾಗಿರುವ ಮತ್ತೂ ಇಬ್ಬರು ವ್ಯಕ್ತಿಗಳನ್ನು ಕೇರಳ ಡಿಎಸ್‌ಪಿ ನೇತೃತ್ವದ ಅಧಿಕಾರಿಗಳ ತಂಡ ವಿಚಾರಣೆಗಾಗಿ ವಶಕ್ಕೆ ಪಡೆದಿದೆ.
ಇವರಲ್ಲಿ ಓರ್ವ ಯುವಕ ಸೆಕೆಂಡ್‌ಹ್ಯಾಂಡ್ ಪುಸ್ತಕದ ಅಂಗಡಿ ನಡೆಸುತ್ತಿದ್ದರೆ ಮತ್ತೋರ್ವ ಯುವಕ ಪಾದರಕ್ಷೆಗಳ ಅಂಗಡಿ ಹೊಂದಿದ್ದಾನೆ. ಇವರನ್ನು ಹೆಚ್ಚಿನ ತನಿಖೆ ಅಗತ್ಯವಿದ್ದರೆ ಕೊಚ್ಚಿಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಕಣ್ಣೂರಿನಲ್ಲಿ ಬೆಳಕಿಗೆ ಬಂದ ಐಸಿಸ್ ಉಗ್ರರ ಜಾಲದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕೊಯಂಬತ್ತೂರು ಮತ್ತು ಕೇರಳದಲ್ಲಿ ಹಲವರನ್ನು ವಿಚಾರಣೆ ನಡೆಸಲಾಗಿದೆ.







