ವ್ಯಾಪಾರಿಗಳ ನಡುವೆ ಗಲಾಟೆ: ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

ಬೆಳಗಾವಿ, ಆ.5: ನಗರದ ಗಣಪತಿ ಗಲ್ಲಿಯಲ್ಲಿ ಹಣ್ಣು ಮಾರಾಟ ಮಾಡುವಾಗ ದರದಲ್ಲಿ ಪೈಪೋಟಿ ನಡೆದು ಹಣ್ಣು ಮಾರಾಟಗಾರರ ನಡುವೆ ಗಲಾಟೆಯಾಗಿ ಪರಸ್ಪರ ಚೂರಿ ಇರಿತವಾಗಿ, ಈ ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ.
ಸೇಬು ಮಾರಾಟಗಾರರ ನಡುವೆ ಪೈಪೋಟಿ ನಡೆದಿದೆ ಇದೇ ಪೈಪೋಟಿ ಗಲಾಟೆಯಾಗಿ ವ್ಯಾಪಾರಿಗಳ ನಡುವೆ ಘರ್ಷಣೆಯಾಗಿದೆ. ಕೆಲವರು ಚೂರಿ ಹಿಡಿದು ಘರ್ಷಣೆಗೆ ಇಳಿದರೆ ಇನ್ನು ಕೆಲವರು ತಕ್ಕಡಿ ಹಾಗೂ ಕಲ್ಲುಗಳನ್ನು ಹಿಡಿದು ಬಡಿದಾಡಿಕೊಂಡಿದ್ದು ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಘರ್ಷಣೆಯಿಂದಾಗಿ ಗಣಪತಿ ಗಲ್ಲಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿ ಶಾಂತವಾಗಿದೆ.
Next Story





