ಜಿಂಕೆ, ಚಿರತೆ ಚರ್ಮಗಳ ಮಾರಾಟಕ್ಕೆ ಯತ್ನ: ಐವರ ಬಂಧನ

ಬೆಂಗಳೂರು, ಆ.5: ಆರ್‌ಎಂಸಿ ಯಾರ್ಡ್‌ನ ಕೆಇಬಿ ವಸತಿ ಗೃಹದ ಬಳಿ ಜಿಂಕೆ ಹಾಗೂ ಚಿರತೆ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಯಶವಂತಪುರ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಲಿಂಗರಾಜಪುರದ ಏಜಾಜ್(28), ಎಡ್ವಿನ್(26), ಆರ್‌ಎಸ್ ಪಾಳ್ಯದ ಜಾನ್(30), ನೀಲಸಂದ್ರದ ಮೊಹಮ್ಮದ್ ಜುಬೇರ್(30) ಹಾಗೂ ಕೆಜಿಎಫ್‌ನ ಅರವಿಂದ್‌ಕುಮಾರ್(28) ಎಂದು ಗುರುತಿಸಲಾಗಿದೆ. ಆರೋಪಿಗಳು ಚೀಲದಲ್ಲಿ ಚಿಂಕೆ ಮತ್ತು ಚಿರತೆ ಚರ್ಮಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Next Story





