Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ...

ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಅವರಿಗೆ ಸನ್ಮಾನ

ವಾರ್ತಾಭಾರತಿವಾರ್ತಾಭಾರತಿ5 Aug 2017 10:17 PM IST
share
ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಅವರಿಗೆ ಸನ್ಮಾನ

ಹೊನ್ನಾವರ,ಆ.5: ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

    ಬಾಲ್ಯದಲ್ಲಿ ಎಲ್ಲರಂತೆ ಚುರುಕಾಗಿರದೇ ಅಂತರ್ಮುಖಿಯಾಗಿರುತ್ತಿದ್ದ. ಓದಿನಲ್ಲೂ ಅಷ್ಟೇನು ಚುರುಕಿಲ್ಲದ ಈ ಹುಡುಗನನ್ನು ಕಂಡವರು ಈತನ ಅಣ್ಣನಿಗಿರುವ ಪ್ರತಿಭೆ ಈತನಲ್ಲಿಲ್ಲ ಎಂದು ಆತನ ತಂದೆ ತಾಯಿಗೆ ಪ್ರಶ್ನಿಸುತ್ತಿದ್ದರು. ಕಳೆದ ಒಂದು ವರ್ಷಗಳಿಂದ ಈತ ಬದಲಾಗಿದ್ದಾನೆ ಎಂದು ಆತನ ತಂದೆ ಪ್ರಕಾಶ ಹೆಗಡೆ ತಿಳಿಸಿದರು. ಮಗ್ಗಿಯನ್ನು ಬಾಲ್ಯದಿಂದಲೇ ಪಟಪಟನೆ ಹೇಳುವ ಜ್ಞಾಪಕ ಶಕ್ತಿ ಇವನದಾಗಿತ್ತು. ಮೊಬೈಲ್ ಫೋನ್, ಟಿವಿ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದ ಈ ಹುಡುಗ ಗೃಹಣ, ಭೂಕಂಪ ವಿಚಾರವನ್ನು ಟಿವಿಯಲ್ಲಿ ತಪ್ಪದೇ ಏಕಾಗ್ರತೆಯಿಂದ ನೋಡುತ್ತಾನೆ. ಕ್ಯಾಲೆಂಡರ್ ಬಗ್ಗೆ ಇವನಿಗೆ ಎಲ್ಲಿಲ್ಲದ ಆಸಕ್ತಿ. ಕ್ಯಾಲೆಂಡರ್ ಕಂಡಾಕ್ಷಣ ತದೇಕ ಚಿತ್ತದಿಂದ ಅಭ್ಯಸಿಸುತ್ತಾನೆ. ಇದೇ ಇವನ ವಿಸ್ಮಯ ಜ್ಞಾಪಕ ಶಕ್ತಿಗೆ ಕಾರಣವಾಗಿರಬಹುದು ಎಂಬ ಅಭಿಪ್ರಾಯ ಪಾಲಕರದ್ದು.

ಈತ ಮುಂಬರುವ 100 ವರ್ಷಗಳ ಯಾವ ದಿನಾಂಕದಂದು ಯಾವ ಹಬ್ಬ-ಹರಿದಿನಗಳು, ಶತಮಾನದಲ್ಲಿ ಬರುವ ಅಧಿಕ ಮಾಸಗಳು, ಕ್ಷಯ ಮಾಸಗಳು ಚಂದ್ರಮಾನ ಯುಗಾದಿ ಬರುವ ದಿನಗಳು, ಮಹಾಶಿವರಾತ್ರಿ ಬರುವ ದಿನಗಳನ್ನು ಕ್ಷಣಾರ್ಧದಲ್ಲಿ ಹೇಳುವ ಮೂಲಕ ಎಲ್ಲರಿಗೂ ಬೆರಗುಗೊಳಿಸಿದ್ದಾನೆ. ಅಷ್ಟೇ ಅಲ್ಲದೇ ಯಾವುದೇ ವ್ಯಕ್ತಿಯ ಹುಟ್ಟಿದ ದಿನಾಂಕವನ್ನು ತಿಳಿಸಿದರೆ ಹುಟ್ಟಿದ ವಾರವನ್ನು ತಿಳಿಸುತ್ತಾನೆ.

ವಿಶ್ವದ ಯಾವುದೇ ದೇಶದ ಹೆಸರು ಹೇಳಿದರೆ ಆ ದೇಶದ ರಾಜಧಾನಿ ಯಾವುದು? ಅಲ್ಲಿ ಹಾದು ಹೋಗುವ ಅಕ್ಷಾಂಶ, ರೇಖಾಂಶದ ಬೆಗ್ಗೆಯೂ ಅವನಲ್ಲಿ ಅಲ್ಲಿನ ವಿಶೇಷತೆಗಳ ಬಗ್ಗೆ ಸಿದ್ಧ ಉತ್ತರ ಸಿಗುತ್ತದೆ. ಈ ಪ್ರತಿಭೆಯನ್ನು ಎಲ್ಲರಿಗೂ ಗುರುತಿಸಬೇಕು ಎಂಬ ಹಂಬಲದಿಂದ ಆತ ಕಲಿತಿರುವ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾರುತಿ ಶೇಟ್ ಮಣ್ಣಿಗೆ, ಮುಖ್ಯ ಶಿಕ್ಷಕ ಕಮಾಲಕರ ಹುಲುಸ್ವಾರ್, ಸತೀಶ ಶೆಟ್ಟಿ, ಸೌಮ್ಯ ಹೆಗಡೆ ಎಲ್ಲರೂ ಸೇರಿ ಹೊನ್ನಾವರ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ಬಾಲಕನ ಪ್ರತಿಭೆ ಪ್ರದರ್ಶಿಸಿದರು. ಇವನ ಭವಿಷ್ಯ ಉಜ್ವಲವಾಗಲಿ ಎಂದು ಹರಸಿದರು. ಪತ್ರಕರ್ತ ಎಚ್.ಎಂ.ಮಾರುತಿ ಪ್ರತಿಭಾವಂತನಿಗೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಬಾಲಕನ ತಂದೆ ಪ್ರಕಾಶ ಹೆಗಡೆ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X