Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಭಿವೃದ್ಧಿಯಲ್ಲಿ ಗ್ರಾಮೀಣ ಜನರೂ...

ಅಭಿವೃದ್ಧಿಯಲ್ಲಿ ಗ್ರಾಮೀಣ ಜನರೂ ಜೊತೆಗಾರರಾಗಲಿ: ಹರೀಶ್ ಹಂದೆ

ವಾರ್ತಾಭಾರತಿವಾರ್ತಾಭಾರತಿ5 Aug 2017 11:00 PM IST
share
ಅಭಿವೃದ್ಧಿಯಲ್ಲಿ ಗ್ರಾಮೀಣ ಜನರೂ ಜೊತೆಗಾರರಾಗಲಿ: ಹರೀಶ್ ಹಂದೆ

ಉಡುಪಿ, ಆ.5: ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆಯ ಹರಿಕಾರರಾಗಿ ದೇಶವನ್ನು ಮುನ್ನೆಡೆಸುವ ಜವಾಬ್ದಾರಿ ಯನ್ನು ಯುವಜನತೆ ವಹಿಸಿಕೊಳ್ಳಬೇಕಿದ್ದು, ಅಭಿವೃದ್ಧಿಯಲ್ಲಿ ಗ್ರಾಮೀಣ ಜನತೆಯನ್ನೂ ಜೊತೆಯಾ ಗಿಸಿಕೊಂಡು ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಪ್ರತಿಷ್ಠಿತ ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಹಾಗೂ ಸೆಲ್ಕೊ ಇಂಡಿಯಾದ ಸ್ಥಾಪಕ ಡಾ.ಹರೀಶ್ ಹಂದೆ ಯುವಜನತೆಗೆ ಕರೆ ನೀಡಿದ್ದಾರೆ.

ಮಣಿಪಾಲ ವಿವಿ ವತಿಯಿಂದ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಲಾದ ‘ಸಾಮಾಜಿಕ ಬದಲಾವಣೆಯಲ್ಲಿ ಯುವ ಜನತೆ’ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ಯುವ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡುತಿದ್ದರು.

ಮಣಿಪಾಲ ವಿವಿಯ ಸ್ವಯಂಸೇವಕ ಸೇವಾ ಸಂಘಟನೆ ಆಯೋಜಿಸಿರುವ ಈ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ದೇಶದ 17ಕ್ಕೂ ಅಧಿಕ ರಾಜ್ಯಗಳ 70ಕ್ಕೂ ಅಧಿಕ ವಿವಿಗಳಿಂದ 600ಕ್ಕೂ ಅಧಿ ವಿದ್ಯಾರ್ಥಿಗಳು ಭಾಗವಹಿಸುತಿದ್ದಾರೆ.
ದೇಶದ ಅಭಿವೃದ್ಧಿ ಕೇವಲ ಶೇ.10ರಷ್ಟಿರುವ ವಿದ್ಯಾವಂತರಿಂದ ಮಾತ್ರ ಸಾಧ್ಯ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ ಇಂದು ಖಂಡಿತ ನಿಜವಲ್ಲ. ದೇಶದಲ್ಲಿ ಶೇ.75ರಷ್ಟಿರುವ ಕೃಷಿಕರಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದವರು ನೇರವಾಗಿ ನುಡಿದರು. ಯುವ ಸಮೂಹವು ಈ ಸತ್ಯ ಅರಿತು ತಮ್ಮ ಚಿಂತನೆಯನ್ನು ಬದಲಾಯಿಸಿಕೊಂಡರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದವರು ನುಡಿದರು.

ದೇಶದಲ್ಲಿ ತುಂಬಾ ತುಂಬಾ ಶ್ರೀಮಂತ ಹಾಗೂ ತೀರಾ ಬಡವರ್ಗ ಎಂಬ ಎರಡು ಪಂಗಡದ ಜನರು ಸೃಷ್ಟಿಯಾಗಿದ್ದು, ಕೃಷಿಕರು ಪದವಿ ಓದದೆಯೂ ಆ ಕ್ಷೇತ್ರದಲ್ಲಿ ತಜ್ಞತೆಯನ್ನು ಹೊಂದಿದ್ದರೂ ಯಾರೂ ಕೂಡ ಅವರ ಬಳಿ ಸಲಹೆ ಕೇಳಲ್ಲ. ಅವರನ್ನು ಯಾವುದೇ ಟಿವಿಯ ಪ್ಯಾನಲ್ ಚರ್ಚೆಗೆ ಕರೆಯುವುದಿಲ್ಲ. ನಮ್ಮ ಇಂದು ನಮ್ಮ ದೇಶದ ದುರಂತ. ದೇಶದಲ್ಲಿ ಶೇ.50ರಷ್ಟಿರುವ ಯುವ ಸಮೂಹ ದೇಶದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯದಂತಹ ಪ್ರಮುಖ ಸಮಸ್ಯೆಗಳತ್ತ ಪ್ರಾಮಾಣಿಕವಾಗಿ ಗಮನಹರಿಸಿದರೆ ಭಾರತದ ಜೀವನದ ಗುಣಮಟ್ಟ ಸುಧಾರಿಸಬಹುದು ಎಂದವರು ಅಭಿಪ್ರಾಯಪಟ್ಟರು.
ದೇಶದಲ್ಲಿ ಸುಮಾರು 2 ಸಾವಿರ ಮಿಲಿಯ ಮಂದಿ ಇನ್ನೂ ವಿದ್ಯುತ್ ಸೌಲ್ಯ ದಿಂದ ವಂಚಿತರಾಗಿದ್ದಾರೆ. ಈಗಲೂ ದೇಶದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರ ವಿರೋಧಿ ಚಿಂತನೆಗಳೇ ಹೆಚ್ಚಾಗಿವೆ. ಇವುಗಳಿಂದ ಹೊರಬಂದು ದೇಶ ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಇನ್ನಷ್ಟು ಅಭಿವೃದ್ಧಿ ಕಾಣಬೇಕಿದೆ ಎಂದವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ್ ಮಾತನಾಡಿ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅರ್ಧ ದಷ್ಟಿರುವ ಯುವಕರು ಮನಸ್ಸು ಮಾಡಿದರೆ ಬದಲಾವಣೆ ಖಂಡಿತ ಸಾಧ್ಯವಿದೆ. ಬಡತನ, ನಿರುದ್ಯೋಗ, ವಿದ್ಯುತ್ ಸಮಸ್ಯೆಗಳಿಗೆ ಯುವ ಸಮೂಹವೇ ಪರಿಹಾರ ಕಂಡುಕೊಳ್ಳಬಹುದು. ವಾಸ್ತವದಲ್ಲಿ ಸುಶಿಕ್ಷಿತರಲ್ಲಿಯೇ ನಾಗರಿಕ ಪ್ರಜ್ಞೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಹೆತ್ತವರು, ಶಿಕ್ಷಕರು ಈ ನಿಟ್ಟಿನಲ್ಲಿ ಯುವಜನತೆಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ವಿಚಾರಸಂಕಿರಣದ ಸಂಚಾಲಕ ಡಾ.ಅನೂಪ್ ನಾಹ ಅತಿಥಿಗಳನ್ನು ಸ್ವಾಗತಿಸಿ ದರು. ವಿದ್ಯಾರ್ಥಿ ಸಂಚಾಲಕ ನವನೀತ್ ಉಪಾಧ್ಯಾಯ ವಂದಿಸಿ, ಕೃತಿ ಕಾರ್ಯಕ್ರಮ ನಿರೂಪಿಸಿದರು.

ಪಿಎಚ್‌ಡಿ ಮಾಡಿದಾಕ್ಷಣ ಪರಿಣಿತನಲ್ಲ
ನಾನು ಕೃಷಿಯಲ್ಲಿ ಪಿಎಚ್‌ಡಿ ಪಡೆದಾಕ್ಷಣ, ನಾನು ಆ ವಿಷಯದಲ್ಲಿ ಪರಿಣಿತ ಎಂದು ಕರೆದುಕೊಳ್ಳಲು ಅರ್ಹತೆ ಪಡೆಯುವುದಿಲ್ಲ. ಆದರೆ 40 ವರ್ಷಗಳ ಕಾಲ ಹಳ್ಳಿಯಲ್ಲಿದ್ದು, ಉತ್ತು, ಬಿತ್ತಿ, ಬೆಳೆ ತೆಗೆಯುವ ರೈತ ನಿಜವಾದ ಕೃಷಿ ಪರಿಣಿತನೆನಿಸಿಕೊಳ್ಳುತ್ತಾನೆ. ಇದನ್ನು ಗುರುತಿಸಲು ನಾವು ವಿಫಲರಾಗುತಿದ್ದೇವೆ. ಬಡವರು ಸಹ ಜೀವನದ ಹಲವು ಕ್ಷೇತ್ರಗಳಲ್ಲಿ ಅಪರಿಮಿತವಾದ ಜ್ಞಾನವನ್ನು ಹೊಂದಿರುತ್ತಾರೆ.ಅವರನ್ನು ಗುರುತಿಸಿ ಅವರ ಅನುಭವವನ್ನು ಕೇಳಿ ತಿಳಿದುಕೊಳ್ಳಿ ಎಂದು ಡಾ.ಹಂದೆ ಯುವಜನತೆಗೆ ಕಿವಿಮಾತು ಹೇಳಿದರು.

ನಾನು ಐಐಟಿ ಸೀಟಿಗಾಗಿ ಪ್ರವೇಶ ಪರೀಕ್ಷೆ ಬರೆಯುವಾಗ ದೇಶದ ಎಲ್ಲಾ 30 ಕೋಟಿ ವಿದ್ಯಾರ್ಥಿಗಳೂ ಪರೀಕ್ಷೆ ಬರೆದಿದ್ದರೆ ನಾನು ಖಂಡಿತವಾಗಿ ಐಐಟಿ ಖರಗಪುರದಲ್ಲಿ ಸೀಟು ಪಡೆಯುತ್ತಿರಲಿಲ್ಲ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯ ಲ್ಲಿರುವ ದೋಷವೇ ಕಾರಣ ಎಂದ ಅವರು, ನನಗೆ ಐಐಟಿ ಶಿಕ್ಷಣ ಸರಕಾರದ ಸಬ್ಸಿಡಿಯಿಂದ ಸುಲಭವಾಯಿತು. ಈ ಸಬ್ಸಿಡಿ ಸಿಕ್ಕಿರುವುದು ಬಡವರು ಹಾಗೂ ತೆರಿಗೆದಾರರು ನೀಡಿದ ಹಣದಿಂದ ಎಂಬುದನ್ನು ಮರೆಯಬಾರದು ಎಂದರು.

ಸಮಸ್ಯೆಗಳಿಗೆಲ್ಲಾ ಗೂಗಲ್ ಪರಿಹಾರವಲ್ಲ
 ಈಗಿನ ಮಕ್ಕಳು, ಯುವಜನತೆ ಎಷ್ಟೇ ಸುಶಿಕ್ಷಿತರಾದರೂ, ಸಮಸ್ಯೆ ಎದುರಾ ದಾಗ ಪರಿಹಾರಕ್ಕೆ ತಕ್ಷಣ ಗೂಗಲ್‌ನಲ್ಲಿ ತಡಕಾಡುತ್ತಾರೆ. ಆದರೆ ಸಮಾಜದಲ್ಲಿ ರುವ ಎಲ್ಲಾ ಸಮಸ್ಯೆಗಳಿಗೆ ಗೂಗಲ್ ಪರಿಹಾರವಲ್ಲ. ನೀವು ದೇಶವನ್ನು ಸುತ್ತಿ, ಮಣಿಪಾಲ, ಬೆಂಗಳೂರು, ಚೈನ್ನೈ, ದಿಲ್ಲಿಯಂತಹ ಮಹಾನಗರಗಳನ್ನು ಬಿಟ್ಟು ಹೊರಬಂದು ಒರಿಸ್ಸಾ, ಬಿಹಾರ, ಜಾರ್ಖಂಡ್‌ನಂತಹ ತೀರಾ ಹಿಂದುಳಿದ ರಾಜ್ಯಗಳ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಆಗ ದೇಶದ ವಾಸ್ತವ ಪರಿಸ್ಥಿತಿ ನಿಮಗೆ ಗೊತ್ತಾಗುತ್ತದೆ. ಅಲ್ಲಿನ ಜನರನ್ನು ಮಾತನಾಡಿಸಿ ಅವರ ಸಮಸ್ಯೆ ಗಳನ್ನು ಕೇಳಿ ಅರ್ಥ ಮಾಡಿಕೊಂಡು ನಂತರ ಪರಿಹಾರಕ್ಕೆ ಮುಂದಾಗಿ ಎಂದು ಹಂದೆ ಹೇಳಿದರು.

ಈಗಿನ ಮಕ್ಕಳು, ಯುವಜನತೆ ಎಷ್ಟೇ ಸುಶಿಕ್ಷಿತರಾದರೂ, ಸಮಸ್ಯೆ ಎದುರಾ ದಾಗ ಪರಿಹಾರಕ್ಕೆ ತಕ್ಷಣ ಗೂಗಲ್‌ನಲ್ಲಿ ತಡಕಾಡುತ್ತಾರೆ. ಆದರೆ ಸಮಾಜದಲ್ಲಿ ರುವ ಎಲ್ಲಾ ಸಮಸ್ಯೆಗಳಿಗೆ ಗೂಗಲ್ ಪರಿಹಾರವಲ್ಲ. ನೀವು ದೇಶವನ್ನು ಸುತ್ತಿ, ಮಣಿಪಾಲ, ಬೆಂಗಳೂರು,

ಚೈನ್ನೆ, ದಿಲ್ಲಿಯಂತಹ ಮಹಾನಗರಗಳನ್ನು ಬಿಟ್ಟು ಹೊರ ಬಂದು ಒರಿಸ್ಸಾ, ಬಿಹಾರ , ಜಾರ್ಖಂಡ್‌ನಂತಹ ತೀರಾ ಹಿಂದುಳಿದ ರಾಜ್ಯಗಳ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಆಗ ದೇಶದ ವಾಸ್ತವ ಪರಿಸ್ಥಿತಿ ನಿಮಗೆ ಗೊತ್ತಾಗುತ್ತದೆ. ಅಲ್ಲಿನ ಜನರನ್ನು ಮಾತನಾಡಿಸಿ ಅವರ ಸಮಸ್ಯೆ ಗಳನ್ನು ಕೇಳಿ ಅರ್ಥ ಮಾಡಿಕೊಂಡು ನಂತರ ಪರಿಹಾರಕ್ಕೆ ಮುಂದಾಗಿ ಎಂದು ಹಂದೆ ಹೇಳಿದರು.

ಸಮಾಜಕ್ಕೆ ನೀವೇನು ನೀಡಿದ್ದೀರಿ?
ಈ ದೇಶ ಸರಿಯಿಲ್ಲ, ಇಲ್ಲಿನ ವ್ಯವಸ್ಥೆ ಸರಿಯಿಲ್ಲ ಎಂದು ದೇಶದ ಸಮಸ್ಯೆಗಳ ಬಗ್ಗೆ ದೂರುವುದೇ ನಾವು ಭಾರತೀಯರ ಹವ್ಯಾಸ. ಆದರೆ ಈ ಸಮಾಜಕ್ಕಾಗಲಿ, ದೇಶಕ್ಕಾಗಲೀ ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ನಾವು ಪ್ರಶ್ನಿಸಿ ಕೊಳ್ಳುವುದೇ ಇಲ್ಲ. ಛತ್ತೀಸ್‌ಗಢ, ಒರಿಸ್ಸಾಗಳಲ್ಲಿ ಈಗಲೂ ನಕ್ಸಲ್ ಸಮಸ್ಯೆ ಇರಲು ನಮ್ಮ ಈ ಧೋರಣೆಯೇ ಕಾರಣ. ನಾವು ಕಲಿತು ದೊಡ್ಡ ಕಂಪೆನಿಗಳಲ್ಲಿ ಕೈತುಂಬ ಸಂಬಳ ಎಣಿಸುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಜನರ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಣ್ಣೆತ್ತಿಯೂ ನೋಡುವುದಿಲ್ಲ.
  -ಡಾ.ಹರೀಶ್ ಹಂದೆ, ಮ್ಯಾಗ್ಸಸ್ಸೆ ಪ್ರಶಸ್ತಿ ವಿಜೇತ ಸೋಲಾರ್ ತಜ್ಞ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X