ಕೊಲೆ ಆರೋಪಿಗೆ ಶರತ್ತುಬದ್ಧ ಜಾಮೀನು
ಮಂಗಳೂರು, ಆ.5: ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ 2016ರ ಫೆಬ್ರವರಿಯಲ್ಲಿ ನಡೆದ ಜಯಾನಂದ ಯಾನೆ ಅಮ್ಮಣ್ಣ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯವು ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ರವೀಂದ್ರ ಸಾಲಿಯಾನ್ ಜಾಮೀನು ಪಡೆದಾತ. ತನ್ನ ಪತ್ನಿ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತನಗೆ ಜಾಮೀನು ನೀಡಬೇಕೆಂದು ಕೋರಿ ರವೀಂದ್ರ ಸಾಲಿಯಾನ್ ಮಂಗಳೂರಿನ 6 ನೆ ಹೆಚ್ಜುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಮೊದಲ ಎರಡು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತ್ತು. 3ನೆ ಬಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಜಯಾನಂದ ಯಾನೆ ಅಮ್ಮಣ್ಣ ಅವರ ಶವವು 2016ರ ಫೆ. 29ರಂದು ಬೆಳಗ್ಗೆ ಸೆಂಟ್ರಲ್ ಮಾರ್ಕೆಟ್‌ನ ಅಂಗಡಿಯೊಂದರ ಆವರಣದಲ್ಲಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬಂದರು ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳಾದ ರವೀಂದ್ರ ಸಾಲಿಯಾನ್, ನವೀನ ಮತ್ತು ರಘು ಅವರನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದರು.ಆರೋಪಿಯ ಪರವಾಗಿ ವಕೀಲರಾದ ಎಸ್.ಪಿ.ಚೆಂಗಪ್ಪ ಮತ್ತು ರೆಹಾನಾ ವಾದಿಸಿದ್ದರು.





