ಪಾಂಡವರಕಲ್ಲಿನಲ್ಲಿ ಸೆರೆಯಾಯಿತು ಚಿರತೆ

ಬಂಟ್ವಾಳ, ಆ. 5: ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಎಂಬಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರ ಆತಂಕಕ್ಕೆ ಕಾರಣವಾಯಿತು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ಗ್ರಾಮಸ್ಥರು ನೀಡಿದ್ದು, ಅದರಂತೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮತ್ತು ತಂಡ, ಚಿರತೆಯನ್ನು ಹಿಡಿದರು. ಬಳಿಕ ಪಶ್ಚಿಮ ಘಟ್ಟಕ್ಕೆ ಅದನ್ನು ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಆರ್.ಎಫ್.ಒ ಸುರೇಶ್, ಡೆಪ್ಯುಟಿ ಆರ್‌ಎಫ್ ಒ ಪ್ರೀತಂ, ಅನಿಲ್, ಗಾರ್ಡ್ ಗಳಾದ ಜಿತೇಶ್, ವಿನಯ್ ಕುಮಾರ್, ಲಕ್ಷ್ಮೀನಾರಾಯಣ, ಜಯರಾಮ್, ಭಾಸ್ಕರ, ಪ್ರವೀಣ್ ಹಾಗೂ ಸ್ನೇಕ್ ಕಿರಣ್, ಪಿಲಿಕುಳದ ಸಿಬ್ಬಂದಿ ಮತ್ತು ಶ್ರೀಪ್ರಸಾದ್ ಭಾಗವಹಿಸಿದ್ದರು.
Next Story





