ಚೆಸ್ ಮುನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ-ಗಣೇಶ್ ಕೊಟ್ಯಾನ್
ಮಂಗಳೂರು ವಿವಿ ಮಟ್ಟದ ಮಾನ್ಸೂನ್ ಚೆಸ್ ಪಂದ್ಯಾಟ

ಪುತ್ತೂರು, ಆ.5: ಏಕಾಗ್ರತೆಯನ್ನು ಅತ್ಯಂತ ಸುಲಭವಾಗಿ ಪಡೆಯಬಹುದಾದ ಚೆಸ್ ಕ್ರೀಡೆ ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು. ಹಾಗಾಗಿ ದೈನಂದಿನ ಜೀವನದಲ್ಲಿ, ಬಿಡುವಿನ ಸಮಯದಲ್ಲಿ ಸಾಧ್ಯವಾದಷ್ಟು ಚೆಸ್ ಹವ್ಯಾಸವನ್ನು ಬೆಳೆಸಿಕೊಂಡರೆ ಉತ್ತಮ ಎಂದು ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೊಟ್ಯಾನ್ ಅವರು ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಆಯೋಜಿಸಲಾದ ಮೂರು ದಿನಗಳ ವಿಶ್ವವಿದಾನಿಲಯ ಮಟ್ಟದ ಮಾನ್ಸೂನ್ ಚೆಸ್ ಟೂರ್ನಮೆಂಟನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ ಅವರು ಮಾತನಾಡಿ ಈ ಕ್ರೀಡೆ ತಾಳ್ಮೆ, ಏಕಾಗ್ರತೆ ಹಾಗೂ ವೈಯಕ್ತಿ ಅಭಿವೃಧ್ದಿಗೆ ಸಹಕಾರಿಯಾಗುತ್ತದೆ ಎಂಬ ಕಾರಣಕ್ಕಾಗಿ ಜಗತ್ತಿನಲ್ಲಿ ಅರ್ಧದಷ್ಟು ಜನ ಇಂದು ಚೆಸ್ ಆಟದಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಮಾತನಾಡಿ, ನಮ್ಮ ಎದುರು ಹಲವಾರು ಅವಕಾಶಗಳಿವೆ. ಹಾಗಾಗಿ ಆಯ್ಕೆಯ ಸಂದರ್ಭದಲ್ಲಿ ನಾವು ತುಂಬಾ ಜಾಗರೂಕರಾಗಿರಬೇಕು. ಕ್ರೀಡೆಗಳು ನಮ್ಮಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಧನಾತ್ಮಕ ಚಿಂತನೆಗೆ ಸಹಕಾರಿಯಾಗಬಲ್ಲದು ಎಂದರು.
ಚೆಸ್ ತೀರ್ಪುಗಾರರಾದ ಪ್ರಸನ್ನ ರಾವ್, ವಿದ್ಯಾರ್ಥಿ ಕ್ಷೇಮ ಪಾಲಕ ಅಧಿಕಾರಿ ಹಾಗೂ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಕಾರಂತ್, ದೈಹಿಕ ಶಕ್ಷಣ ನಿರ್ದೇಶಕ ರವಿಶಂಕರ್ ಇದ್ದರು. ದೈಹಿಕಶಿಕ್ಷಣ ನಿರ್ದೇಶಕಿ ಡಾ. ಜ್ಯೋತಿ ಸ್ವಾಗತಿಸಿದರು. ಯತೀಶ್ ಕುಮಾರ್ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ ಆರ್ ನಿಡ್ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.







