ಚಾಂಪಿಯನ್ ಬೆಲ್ಟನ್ನು ಹಿಂದಿರುಗಿಸಿ ಗೆದ್ದರು ವಿಜೇಂದರ್
ಯುದ್ಧ ಬೇಡವೆಂಬ ಸಂದೇಶ ಸಾರಿದ ಬಾಕ್ಸರ್

ಮುಂಬೈ,ಆ.6: ಗಡಿಯಲ್ಲಿ ಭಾರತ-ಚೀನಾ ಘರ್ಷಣೆ ತೀಕ್ಷ್ಣಗೊಂಡಿರುವುದರ ನಡುವೆ ಬಾಕ್ಸಿಂಗ್ ರಿಂಗ್‍ನಲ್ಲಿ ನಡೆದ ಭಾರತ-ಚೀನಾ ಹೋರಾಟ ಹೆಚ್ಚು ಗಮನಸೆಳೆದಿತ್ತು. ಪ್ರೊಫೆಶನಲ್ ಬಾಕ್ಸಿಂಗ್‍ನ ಏಶ್ಯ ಫೆಸಿಫಿಕ್ ಸೂಪರ್ ಮಿಡ್ಲ್ ವೈಟ್ ಪ್ರಶಸ್ತಿಯನ್ನು ಚೀನಾದ ಬಾಕ್ಸಿಂಗ್ ಪಟು ಝುಲ್ಫಿಕರ್ ಅವರನ್ನುಸೋಲಿಸಿ ವಿಜೇಂದರ್ ಸಿಂಗ್ ಗಳಿಸಿಕೊಂಡಿದ್ದಾರೆ. ಈ ವಿಜಯವನ್ನು ಭಾರತ-ಚೀನಾ ದ್ವೇಷವನ್ನು ಮಿಶ್ರಣಮಾಡಿ ಎಲ್ಲರೂ ಆಚರಿಸಿದ್ದಾರೆ.
ಆದರೆ, ಇದನ್ನು ವಿಜೇಂದರ್ ಸಿಂಗ್ ವಿರೋಧಿಸಿದ್ದಾರೆ. ಭಾರತ-ಚೀನಾ ಗಡಿ ಘರ್ಷಣೆಯನ್ನು ಹೆಚ್ಚಿಸಲು ತಾನು ಬಯಸುವುದಿಲ್ಲ. ಚಾಂಪಿಯನ್ ಪಟ್ಟ ತನಗೆ ಬೇಡ ಎಂದು ವಿಜೇಂದರ್ ಹೇಳಿದರು. ಪ್ರೊಫೆಶನಲ್ ಬಾಕ್ಸಿಂಗ್‍ನಲ್ಲಿ ನಿರಂತರ ಒಂಬತ್ತನೆ ಗೆಲುವನ್ನು ಮುಂಬೈಯಲ್ಲಿ ವಿಜೇಂದರ್ ದಾಖಲಿಸಿದ್ದಾರೆ. ಈಗೆಲುವಿನೊಂದಿಗೆ ಏಶ್ಯ ಪೆಸಿಫಿಕ್ ಸೂಪರ್ ಮಿಡ್ಲ್‍ವೈಟ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು, ಓರಿಯಂಟಲ್ ಸೂಪರ್ ಮಿಡ್ಲ್‍ವೈಟ್ ಪ್ರಶಸ್ತಿಗಳಿಸಲು ಒಲಿಪಿಂಕ್ಸ್‍ನ ಕಂಚು ವಿಜೇತರಾದ ವಿಜೇಂದರ್‍ಗೆ ಸಾಧ್ಯವಾಗಿದೆ. ಆದರೆ ಈ ಟೈಟಲ್‍ಗಳುತನಗೆ ಬೇಡ ಎಂದು ವಿಜೇಂದರ್ ಸ್ಪರ್ಧೆಯ ಬಳಿಕ ಹೇಳಿದ್ದಾರೆ.
" ಈ ವಿಜಯ ಬೆಲ್ಟನ್ನು ಮರಳಿಸುವ ಮೂಲಕ ಭಾರತ-ಚೀನಾಗಳ ನಡುವೆ ಗಡಿಯಲ್ಲಿರುವ ಘರ್ಷಣೆ ಕಡಿಮೆಮಾಡಲು ನಾನು ಶ್ರಮಿಸುತ್ತಿದ್ದೇನೆ. ಇದು ಮಾತ್ರ ನನ್ನಿಂದ ದೇಶಕ್ಕೆ ನೀಡಲು ಸಾಧ್ಯವಿರುವ ಸಂದೇಶವಾಗಿದೆ" ಎಂದು ವಿಜೇಂದರ್ ಹೇಳಿದರು.
ಸ್ಪರ್ಧೆಯ ವೇಳೆ ಮೂಗಿನಿಂದ ರಕ್ತ ಸುರಿದರೂ ರಿಂಗ್ ತೊರೆಯದೆ ವಿಜೇಂದರ್ ಕಠಿಣ ಹೋರಾಟದಲ್ಲಿ ಚೀನಾದ ಪ್ರತಿಸ್ಪರ್ಧಿಯನ್ನು 96-93, 95-94, 95-94 ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿದ್ದಾರೆ.





