ಬಾಂಗ್ಲಾದೇಶದ ಶಂಕಿತ ಉಗ್ರನನ್ನು ಬಂಧಿಸಿದ ಉ.ಪ್ರ. ಪೊಲೀಸ್

ಲಕ್ನೋ, ಆ.6: ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ತಂಡ(ಎಟಿಎಸ್)ಬಾಂಗ್ಲಾದೇಶದ ಶಂಕಿತ ಉಗ್ರ ಅಬ್ದುಲ್ಲಾನನ್ನು ರವಿವಾರ ಬಂಧಿಸಿದೆ.
‘‘ಮುಝಾಫರ್‌ನಗರ ಜಿಲ್ಲೆಯ ಚಾರ್ಥವಾಲ್ ಪ್ರದೇಶದ ಕುಟ್ಸಾರಾದಲ್ಲಿ ಎಟಿಎಸ್ ತಂಡ ಅಬ್ದುಲ್ಲಾನನ್ನು ಬಂಧಿಸಲಾಗಿದೆ. 2011ರಿಂದ ದೇವ್‌ಬಂದ್ ಪ್ರದೇಶದ ಸಹರಾನ್ಪುರದಲ್ಲಿ ನೆಲೆಸಿದ್ದು, ಕಳೆದ ತಿಂಗಳು ಕುಟ್ಸಾರಾಕ್ಕೆ ಬಂದಿದ್ದ. ಅಬ್ದುಲ್ಲಾ ನಕಲಿ ಗುರುತುಪತ್ರ ಬಳಸಿಕೊಂಡು ಆಧಾರ್ ಹಾಗೂ ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿದ್ದ ಎಂದು ಎಟಿಎಸ್ ಎಜಿ ಅಸಿಮ್ ಅರುಣ್ ಹೇಳಿದ್ದಾರೆ.
ಬಾಂಗ್ಲಾದೇಶದ ಉಗ್ರಗಾಮಿಗಳಿಗೆ ನಕಲಿ ಗುರುತುಪತ್ರ ದಾಖಲೆಗಳನ್ನು ತಯಾರಿಸಿಕೊಡುವುದರಲ್ಲಿ ಈತ ಸಕ್ರಿಯನಾಗಿದ್ದ. ಬಂಧಿತ ಅಬ್ದುಲ್ಲಾ ಬಾಂಗ್ಲಾದೇಶದ ತೀವ್ರಗಾಮಿ ಸಂಘಟನೆ ಅನ್ಸಾರುಲ್ಲಾ ಬಾಂಗ್ಲಾ ಟೀಮ್(ಎಬಿಟಿ)ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





