ಶಾಮಿಯಾನ ವಾಹನಗಳಿಗೆ ಕಿರುಕುಳ; ಎಸ್ಪಿ ಜೊತೆ ಮಾತುಕತೆ: ಪ್ರಮೋದ್

ಉಡುಪಿ, ಆ.6: ಶಾಮಿಯಾನ ಸಾಗಾಟದ ವಾಹನಗಳಿಗೆ ಪೊಲೀಸರು ನೀಡುವ ಕಿರುಕುಳದ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರೊಂದಿಗೆ ಮಾತುಕತೆ ನಡೆಸಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಒಕ್ಕೂಟಕ್ಕೆ ನಿವೇಶನ ಮಂಜೂರು ಮಾಡುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟದ ದಶಮಾನೋತ್ಸವ ಸಮಾರಂಭವನ್ನು ರವಿವಾರ ಉಡುಪಿ ಮಿಶನ್ ಕಂಪೌಂಡ್‌ನ ಯುಬಿಎಂಸಿ ಹಾಲ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶಾಮಿಯಾನ ಪ್ರತಿಯೊಂದು ಕಾರ್ಯಕ್ರಮಕ್ಕೂ ಅನಿವಾರ್ಯ. ವ್ಯವಹಾರ ದಲ್ಲಿ ರಾಜರಾಗಿರುವ ಗ್ರಾಹಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸೇವೆ ನೀಡುವ ಕೆಲಸ ಮಾಡಬೇಕು. ಪ್ರತಿಯೊಂದು ಸೇವೆಯಲ್ಲೂ ಗುಣಮಟ್ಟವನ್ನು ಕಾಯ್ದು ಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಕಾರ್ಮಿಕ ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಖಂಡ ಮೆಹಬೂಬ್ ಮುಲ್ಲಾ, ಒಕ್ಕೂಟದ ಉಪಾಧ್ಯಕ್ಷರಾದ ರಾಜೇಶ್ ಶೇಟ್, ಕರುಣಾಕರ, ಪ್ರಧಾನ ಕಾರ್ಯ ದರ್ಶಿ ಗಣೇಶ್ ಎಂ.ಕೆ., ಪದಾಧಿಕಾರಿಗಳಾದ ರಾಜೇಶ್, ಕರುಣಾಕರ, ಶೌಕತ್ ಅಲಿ, ರಾಜೇಶ್ ಅಲೆವೂರು, ಶ್ರೀಧರ್ ಪ್ರಭು, ನಾರಾ ಯಣ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ವಹಿಸಿ ದ್ದರು. ಜಿಲ್ಲಾ ಸಂಚಾಲಕ ವಿಜಯ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಅರುಣ್ ಕುಮಾರ್ ವರದಿ ವಾಚಿಸಿದರು.







