ಪುತ್ರನ ಅಪರಾಧಕ್ಕೆ ತಂದೆಯನ್ನು ಶಿಕ್ಷಿಸಲು ಸಾಧ್ಯವಿಲ್ಲ: ಹರ್ಯಾಣ ಮುಖ್ಯಮಂತ್ರಿ

ಹೊಸದಿಲ್ಲಿ,ಆ. 6: ಪುತ್ರ ಮಾಡಿದ ಅಪರಾಧಕ್ಕೆ ಹರ್ಯಾಣ ಬಿಜೆಪಿ ಅಧ್ಯಕ್ಷ ಸುಭಾಶ್ ಬರೇಲರನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಯುವತಿಯನ್ನು ಕಾರಿನಲ್ಲಿ ಹಿಂಬಾಲಿಸಿದ್ದಕ್ಕಾಗಿ ಸುಭಾಶ್ ಬರೇಲರ ಪುತ್ರ ಮತ್ತು ಸಹಚರರನ್ನು ಬಂಧಿಸಲಾಗಿದೆ.
ನಂತರ ಬರೇಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಹರ್ಯಾಣ ಮುಖ್ಯಮಂತ್ರಿ ಬರೇಲರ ರಕ್ಷಣೆಗೆ ಧಾವಿಸಿದ್ದಾರೆ.
ಬರೇಲ ಪುತ್ರ ವಿಕಾಸ್ ಬರೇಲ(23), ಆಶಿಕ್ ಕುಮಾರ್(22) ಎಂಬವರನ್ನು ಶುಕ್ರವಾರ ರಾತ್ರಿ ಚಂಡಿಗಡ ಮಧ್ಯಮಾರ್ಗ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಯುವತಿಯ ದೂರಿನ ಪ್ರಕಾರ ಇವರಿಬ್ಬರ ವಿರುದ್ಧ ಭಾರತ ದಂಡ ಸಂಹಿತೆ 345(ಡಿ) ಮೋಟಾರು ವಾಹನ ನಿಯಮದ 185ನೆ ಕಲಂ ಪ್ರಕಾರ ಪೊಲೀಸರು ಕೇಸು ದಾಖಲಿಸಿದ್ದಾರೆ.
Next Story





