ಅಂಚೆ ಇಲಾಖೆ ನೌಕರರಿಗೆ ನಿವೇಶನ: ಎಂ.ಕೃಷ್ಣಪ್ಪ

ಬೆಂಗಳೂರು, ಆ.6:ರಾಜ್ಯದಲ್ಲಿರುವ ಅಂಚೆ ಇಲಾಖೆ ನೌಕರರಿಗೆ ನಿವೇಶನ ಸೌಕರ್ಯ ಕಲ್ಪಿಸಿಕೊಡುವುದಾಗಿ ವಸತಿ ಖಾತೆ ಸಚಿವ ಎಂ.ಕೃಷ್ಣಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅಂಚೆ ಇಲಾಖೆ ಸಿ-ದರ್ಜೆ ನೌಕರರ ಸಂಘಟನೆಯ 31ನೆ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಚೆ ಇಲಾಖೆ ನೌಕರರಿಗೆ ಬೆಂಗಳೂರು ಮತ್ತು ಮಂಡ್ಯ ನಗರ ವ್ಯಾಪ್ತಿಗಳಲ್ಲಿ ನಿವೇಶನ ಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ನೌಕರರಿಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಎನ್ನುವ ಹಲವಾರು ಬೇಡಿಕೆಗಳನ್ನು ನೌಕರರ ಸಂಘ ಸರಕಾರದ ಮುಂದಿಟ್ಟಿದೆ. ಈ ಬಗ್ಗೆ ನಮ್ಮ ಇಲಾಖೆಯಿಂದ ಸಾಧ್ಯವಾದ ರೀತಿಯ ಪರಿಹಾರಗಳನ್ನು ನೀಡುಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಕೃಷ್ಣಪ್ಪ ಹೇಳಿದರು.
ಕಾರ್ಮಿಕರ ಹಿತಕ್ಕಾಗಿ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.ಹೀಗಾಗಿ, ಪ್ರತಿಯೊಬ್ಬರು ಸರಕಾರಿ ಕಾರ್ಯಕ್ರಮಗಳನ್ನು ಸದು ಪಯೋಗಪಡಿಸಕೊಳ್ಳಲು ಮುಂದಾಗಬೇಕೆಂದ ಅವರು, ಅಂಚೆ ನೌಕರರಿಗೆ ನಿವೇಶ ಒದಗಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.





