ಕರ್ನಾಟಕ ಕಟ್ಟಡ ಕಾರ್ಮಿಕ ಸಂಘದಿಂದ ರಕ್ತದಾನ, ಮಾಹಿತಿ ಶಿಬಿರ

ಪುತ್ತೂರು, ಆ. 6: ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ರವಿವಾರ ಪುತ್ತೂರಿನ ಅನುರಾಗ ವಠಾರದ ಆವರಣದಲ್ಲಿ ರಕ್ತದಾನ ಹಾಗೂ ರಕ್ತದಾನದ ಕುರಿತು ಮಾಹಿತಿ ಶಿಬಿರ ನಡೆಯಿತು.
ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಬ್ಲಡ್ ಬ್ಯಾಂಕ್‌ನ ಸುಶ್ರೂಸಲೊ ಸವಿತ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಸಂಘದ ಗೌರವ ಸಲಹೆಗಾರ ಜಯರಾಮ ಕುಲಾಲ್, ಉಪಾಧ್ಯಕ್ಷ ವಿಶ್ವನಾಥ ಬೆಳ್ಳಿಪ್ಪಾಡಿ, ಕೋಶಾಧಿಕಾರಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
Next Story





