ಜಿ.ಪಂ ಅಧ್ಯಕ್ಷ ಎಂ.ರಾಮಚಂದ್ರಗೆ ಬ್ರಿಗೇಡ್ ವತಿಯಿಂದ ಸನ್ಮಾನ

ಚಾಮರಾಜನಗರ,ಆ. 6: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೂತನವಾಗಿ ನೇಮಕವಾದ ಜಿ.ಪಂ ಅಧ್ಯಕ್ಷ ಎಂ.ರಾಮಚಂದ್ರ ಅವರನ್ನು ಪಾಳೇಗಾರ ಮಾರನಾಯಕ ಯುವ ಬ್ರಿಗೇಡ್‍ನ ಸದಸ್ಯರು ಇಂದು ನಗರದಲ್ಲಿ ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ರಾಮಚಂದ್ರ ಅವರು ಕಾಂಗ್ರೆಸ್ ಪಕ್ಷವು ನನ್ನ ಸೇವೆಯನ್ನು ಪರಿಗಣಿಸಿ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿ ಪಕ್ಷವುನ್ನು ಸಂಘಟಿಸುವಂತಹ ಮಹತ್ತರ ಜವಾಬ್ದಾರಿ ನೀಡಿದೆ. ಇದಕ್ಕೆ ಬದ್ದನಾಗಿ ನಾನು ಪ್ರಾಮಾಣಿಕವಾಗಿ ಹುದ್ದೆಗೆ ಕಳಂಕ ಬಾರದಂತೆ ಪಕ್ಷದ ಸಂಘಟನೆಯನ್ನು ಬಲಪಡಿಸಲು ಕಾರ್ಯಕರ್ತರೊಡಗೂಡಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು. ಬ್ರಿಗೇಡ್ ವತಿಯಿಂದ ಸಮಾಜದ ಪರವಾಗಿ ಅಭಿನಂದಿಸಿದ್ದು ಖುಷಿ ತಂದಿದ್ದು ಸಮಾಜದ ಏಳಿಗೆಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಿಗೇಡ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬದನಗುಪ್ಪೆ ನಾರಾಯಣ್, ಖಜಾಂಚಿ ಕುದೇರು ಮಹದೇವನಾಯಕ, ಮಾಜಿ ನಗರಸಭೆ ಅಧ್ಯಕ್ಷ ಸುರೇಶ್ ನಾಯ್ಕ, ದೀಪಕ್, ಅಗರ ರಾಜು, ಶಿವು ವಿರಾಟ್, ಜಯರಾಮನಾಯಕ, ಮಾದೇಶ್, ರವಿ, ನಂಜುಂಡನಾಯ್ಕ, ಲೋಕೇಶ್, ಶ್ರೀನಿವಾಸ ನಾಯ್ಕ ಇತರರು ಹಾಜರಿದ್ದರು.





