ಜುನೈದ್ ಕುಟುಂಬಸ್ಥರಿಗೆ ಸಿಪಿಎಂನಿಂದ 10 ಲಕ್ಷ ರೂ. ಪರಿಹಾರ

ತಿರುವನಂತಪುರ, ಆ. 5: ರೈಲಿನಲ್ಲಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಮೃತಪಟ್ಟ ಯುವಕ ಜುನೈದ್ ಖಾನ್ ಕುಟುಂಬಕ್ಕೆ ನಷ್ಟ ಪರಿಹಾರವಾಗಿ 10 ಲಕ್ಷ ರೂ. ನೀಡಲಾಗುವುದು ಎಂದು ಕೇರಳದ ಆಡಳಿತಾರೂಢ ಸಿಪಿಎಂ ಹೇಳಿದೆ.
ಸಿಪಿಎಂನ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ದಿಲ್ಲಿಯಲ್ಲಿರುವ ಕೇರಳ ಹೌಸ್‌ಗೆ ಜುನೈದ್‌ನ ಕುಟುಂಬ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಾಟ್ ಅವರೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿತ್ತು.
ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡುವಂತೆ ಕುಟುಂಬ ಕೋರಿತ್ತು. ಕೇಂದ್ರ ಸಮಿತಿಯ ಮೂಲಕ ಆ ಹಣವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
Next Story





