ಹೊಳೆಗೆ ಬಿದ್ದು ಬಾಲಕ ಮೃತ್ಯು
ಮಡಿಕೇರಿ ಆ.6: ಕಾಲು ತೊಳೆಯುವ ಸಂದರ್ಭ ಜಾರಿ ಹೊಳೆಗೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ವಿರಾಜಪೇಟೆಯ ಬೇಟೊಳಿ ಗ್ರಾಮದಲ್ಲಿ ರವಿವಾರ ನಡೆದಿದೆ.
ತೆಲುಗರ ಬೀದಿಯ ಎ. ನಂದೀಶ್ ಎಂಬವರ ಪುತ್ರ, 10ನೇ ತರಗತಿಯ ವಿದ್ಯಾರ್ಥಿ ಎ.ಎನ್.. ಗಗನ್(16) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಗಗನ್ ಹಾಗೂ ಆತನ ಸ್ನೇಹಿತರು ಸೇರಿದಂತೆ ಒಟ್ಟು ಏಳು ಮಂದಿ ಬೇಟೋಳಿ ಶಾಲೆಯ ಬಳಿ ವಾಲಿಬಾಲ್ ಆಡುವ ಸಲುವಾಗಿ ತೆರಳಿದ್ದರು. ಮಧ್ಯಾಹ್ನ ಅಲ್ಲೇ ಸಮೀಪದಲ್ಲಿ ತುಂಬಿ ಹರಿಯುತ್ತಿದ್ದ ಕಿರು ಹೊಳೆಯಲ್ಲಿ ಕಾಲು ತೊಳೆಯಲು ತೆರಳಿದ ಗಗನ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





