ಅಪ್ರಾಪ್ತ ಬಾಲಕಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ: ಭಾರತೀಯ ವೈದ್ಯನ ಬಂಧನ

ನ್ಯೂಯಾರ್ಕ್, ಆ.6: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದಲ್ಲಿ 28 ವರ್ಷ ವಯಸ್ಸಿನ ಭಾರತೀಯ ವೈದ್ಯನೊಬ್ಬನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಜುಲೈ 24ರಂದು ಈ ಘಟನೆ ನಡೆದಿದ್ದು, ಸಿಯಾಟಲ್‌ನಿಂದ ನ್ಯೂಜೆರ್ಸಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಡಾ. ವಿಜಯ್ ಕುಮಾರ್ ಕೃಷ್ಣಪ್ಪ ಬಂಧಿತ ಆರೋಪಿ. ಆತ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದನೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಾಲಕಿ ವಿಮಾನದ ಸಿಬ್ಬಂದಿಗೆೆ ದೂರು ನೀಡಿದಾಗ ವೈದ್ಯ ಕೃಷ್ಣಪ್ಪನನ್ನು ಬೇರೆ ಸೀಟಿನಲ್ಲಿ ಕುಳ್ಳಿರಿಸಲಾಯಿ.ತು.
ವಿಮಾನವು ಸಿಯಾಟಲ್‌ನ ನೆವಾರ್ಕ್ ವಿಮಾನನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಬಾಲಕಿಯು ತನ್ನ ಪೋಷಕರಿಗೆ ವಿಷಯ ತಿಳಿಸಿದಳು. ಈ ಹೊತ್ತಿಗೆ ಆರೋಪಿ ವಿಜಯ್ ಕುಮಾರ್ ಕೃಷ್ಣಪ್ಪ , ವಿಮಾನನಿಲ್ದಾಣದಿಂದ ನಿರ್ಗಮಿಸಿದ್ದನೆನ್ನಲಾಗಿದೆ. ಆನಂತರ ಬಾಲಕಿಯ ಕುಟುಂಬವು ಲೈಂಗಿಕ ಕಿರುಕುಳದ ಆರೋಪಿ ಕೃಷ್ಣಪ್ಪನ ವಿರುದ್ಧ ದೂರು ನೀಡಿತು. ವಿಮಾನಪ್ರಯಾಣಿಕರ ಛಾಯಾಚಿತ್ರಗಳ ಮೂಲಕ ಬಾಲಕಿಯು ಆರೋಪಿಯನ್ನು ಗುರುತಿಸಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.
ಆನಂತರ ಪೊಲೀಸರು ಕೃಷ್ಣಪ್ಪನನ್ನು ಬಂಧಿರಿದ್ದು, ನ್ಯಾಯಾಲಯ ಆತನಿಗೆ ಜಾಮೀನು ಬಿಡುಗಡೆ ನೀಡಿದೆ. ಅಮೆರಿಕದ ವೈದ್ಯಕೀಯ ತಜ್ಞರಿಂದ ತರಬೇತಿ ಪಡೆಯಲು ಆಗಮಿಸುವ ವಿದೇಶಿ ವೈದ್ಯರಿಗೆ ಅವಕಾಶ ನೀಡುವ ಆರು ತಿಂಗಳುಗಳ ಮೆಡಿಕಲ್ ಫೆಲೋಶಿಪ್ ಯೋಜನೆಯಡಿ ಕೃಷ್ಣಪ್ಪ ಅಮೆರಿಕಕ್ಕೆ ಆಗಮಿಸಿದ್ದನೆನ್ನಲಾಗಿದೆ.







