ಪರಿಹಾರ ನೀಡಲು 24 ವರ್ಷ ವಿಳಂಬ: ಹೈಕೋರ್ಟ್ ವಿಷಾದ

ಚೆನ್ನೈ, ಆ. 5: ಕ್ಷಮಿಸಿ, ನಿಮ್ಮ ಹಕ್ಕನ್ನು ರಕ್ಷಿಸಲು ನೀವು ದೀರ್ಘಕಾಲ ಕಾಯುವಂತೆ ನಾವು ಮಾಡಿದೆವು. 1993ರಲ್ಲಿ ಪುತ್ರ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪರಿಹಾರ ಪಡೆಯಲು 24 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ ಮಹಿಳಾ ಕಕ್ಷಿದಾರಳ ಮುಂದೆ ಕ್ಷಮೆ ಕೇಳುವ ಅಪರೂಪದ ಧೈರ್ಯವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ತೋರಿಸಿತು.
ಮೋಟರ್ ಆ್ಯಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯುನಲ್ (ಎಂಎಸಿಟಿ) 3.4 ಲಕ್ಷ ಪರಿಹಾರದ ಆದೇಶ ಪ್ರಶ್ನಿಸಿ ಸಾರ್ವಜನಿಕ ವಲಯದ ವಿಮಾ ಕಂಪೆನಿ ಸಲ್ಲಿಸಿದ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿ ಎನ್. ಶೇಷಶಾಹಿ, 1993 ಮೇಯಲ್ಲಿ ಈ ಅಪಘಾತ ಸಂಭವಿಸಿದೆ. ಇಲ್ಲಿಗೆ 24 ವರ್ಷ ಆಯಿತು. ಆದರೆ, ಇದುವರೆಗೆ ತಾಯಿಗೆ ಪರಿಹಾರ ದೊರಕಿಲ್ಲ. ಅವರು ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಮನವಿಯ ವಿಚಾರಣೆ ಬಾಕಿ ಇರುವುದರಿಂದ ಟ್ರಿಬ್ಯೂನಲ್ ಆಕೆಗೆ ನೀಡಿದ ಪರಿಹಾರ ಇನ್ನಷ್ಟು ತಡವಾಗುತ್ತದೆ ಎಂದು ಅವರು ಹೇಳಿದ್ದಾರೆ.
Next Story





